![]() |
| ಚಿತ್ರಕೃಪೆ: ಅಂತರ್ಜಾಲ |
ನಿನಗಾಗಿ ನಾನೇಕೆ
ಅಡಿಗಡಿಗೆ ಹಂಬಲಿಸಿ
ಕಾಯುತ್ತಿರುವೆ?
ಕೃಷ್ಣ ನಿನ್ನಡಿಯಲ್ಲಿ
ಕನವರಿಸಿ ಕನವರಿಸಿ
ಕರಗುತ್ತಿರುವೆ?
ಮನಸಾಗಿ ರಾಜಿಸಿದ ನೀ
ಯಾಕೆ ಮರೆತಿರುವೆ
ಮನದ ಈ ನುಡಿಗಳಿಗೆ
ದನಿಯಾಗಬಿಡದೇ?
ನನ್ನ ದನಿಗೊಮ್ಮೆಯೂ
ಕಿವಿಯಾಗದೆ?
ಎಡಬಿಡದೇ ದಣಿದಿರುವ
ದಿನಕಿಲ್ಲ ನಿದ್ರೆ!
ಕನಸಲ್ಲಿ ಕಾಡುವುದು
ನಿನ್ನದೇ ಮುದ್ರೆ!
ನೀನೇಕೆ ನನ್ನ ಒಳಗುಡಿಯ
ಸೇರಿದೆ?
ನೀನಿಲ್ಲದೀದಿನಕು
ನನ್ನೊಳಗು ಅಳುತಿದೆ
ಹೇಗೆ ಹೇಳಲಿ ಮನವೇ
ಕೊಳಲ ಪರಿ ಜೀವ!
ಒಳಗಿನುಸಿರೆ ಜೀವ!
ಬೆರಳ ನೇವರಿಸಿ
ನೀ ನುಡಿಸದಿರೆ
ನಾದವೆಲ್ಲಿಂದ ತರಲಿಹೇಳು?
ನೀ ಉಸಿರ ಭಾವದಲಿ
ನನ್ನದೆಯ ಜೀವದಲಿ
ಇಷ್ಟು ಸಾಕಲ್ಲ
ಕೃಷ್ಣ ಬಾಳು!

>>ಎಡಬಿಡದೇ ದಣಿದಿರುವ
ReplyDeleteದಿನಕಿಲ್ಲ ನಿದ್ರೆ!
ಕನಸಲ್ಲಿ ಕಾಡುವುದು
ನಿನ್ನದೇ ಮುದ್ರೆ! <<
ಚೆನ್ನಾಗಿದ್ದು ಕವನ :-)
Chennagide. artha garbhita saalugaLu.
ReplyDeleteDhanyavadagalu prashasti hagu shridhar avarige...
ReplyDeleteಎಡಬಿಡದೇ ದಣಿದಿರುವ
ReplyDeleteದಿನಕಿಲ್ಲ ನಿದ್ರೆ!
ಕನಸಲ್ಲಿ ಕಾಡುವುದು
ನಿನ್ನದೇ ಮುದ್ರೆ!
ಒಳಗಿನುಸಿರೆ ಜೀವ!
ಬೆರಳ ನೇವರಿಸಿ
ನೀ ನುಡಿಸದಿರೆ
ನಾದವೆಲ್ಲಿಂದ ತರಲಿಹೇಳು?
ನೀ ಉಸಿರ ಭಾವದಲಿ
ನನ್ನದೆಯ ಜೀವದಲಿ
ಇಷ್ಟು ಸಾಕಲ್ಲ
ಕೃಷ್ಣ ಬಾಳು....
ಸುಂದರವಾದ ಸಾಲುಗಳು.. ತುಂಬಾ ಇಷ್ಟ ಆಯಿತು ಈ ಕವನ....
Tumbaaa Danyavaadagalu Ashok shettyyvare...
ReplyDeleteಸಿರಿ ಅಕ್ಕ ಮತ್ತೊಂದು ಚೆಂದದ ಕವನ. ಇಷ್ಟ ಆಯ್ತು. :)
ReplyDeleteಧನ್ಯವಾದಗಳು ಸತೀಶ್...ನಿಮ್ಮ ಸಲಹೆ ಸೂಚನೆ ವಿಮರ್ಶೆಗಳೂ ಇರಲಿ ಕವಿತೆಗಳಿಗೆ..
ReplyDeleteಅನನ್ಯ ಅರ್ಪಣಾ ಭಾವದ ಸಾಲುಗಳು
ReplyDelete'ನೀ ನುಡಿಸದಿರೆ
ನಾದವೆಲ್ಲಿಂದ ತರಲಿಹೇಳು?'
ವಾವ್ ಒಳ್ಳೆಯ ಬ್ಲಾಗಿನ ಪರಿಚಯವಾಯಿತು.
tumba tumbaa dhanyavadagalu Badari Sir
ReplyDeleteಇಷ್ಟವಾಯ್ತೀ ಭಾವ
ReplyDelete