ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Tuesday, June 7, 2011

ಮುಕ್ತಿಯೆಡೆಗೆ....





ಕತ್ತಲೆಯ ಒಳಮನೆಗೆ
ಬೆತ್ತಲೆಯ ಹಂಗಿಲ್ಲ.
ಬೆಳಕಿನಲೆಗಳ ತೀರ
ಕಾಯುವುದಿಲ್ಲ.


ಆಳದಾಳಕೆ ನಿಶ್ಯಬ್ಧ ನಡೆಯುತಿರೆ
ಈ ಜಗದ ಗೊಂದಲದ
ಗದ್ದಲವೇ ಇಲ್ಲ!


ನಿತ್ಯ ನಿಯಮಗಳ ಮೀರಿ
ತಮೋಹಾರಿಯನರಸಿ
ಹೊರಟ ಗಳಿಗೆಯಲಿಂದು
ಬಂಧಗಳು ಭಾವಗಳು
ಪ್ರೇಮಜೀವವು ಬೇಡ..


ದೀಪವಿಲ್ಲದ ಗಮ್ಯದೆಡೆ
ಜಾರುತಿದೆ ಮನವು!!
ನೆಲೆಯಾಗಲಲ್ಲಿಯೇ
ಎಲ್ಲ ಗೆಲುವು....