ಸಾಗರ ತೀರದ ಮುಸ್ಸಂಜೆಯಲಿ
ಮತ್ತದೇ ಹೆಜ್ಜೆಗಳ ಮೂಡಿಸುವ ಕನಸು
ಬುಟ್ಟಿ ತುಂಬ ಬೊಗಸೆ ಪಾರಿಜಾತವ ತುಂಬಿ
ನಿನ್ನ ನಸುನಗೆಗೆ ಕಾಯುವ ಮನಸು!
ಜಲಪಾತದಂಚಲ್ಲಿ ಮುತ್ತುಗಳ ತುಂಬಿಕೊಂಡು
ಆ ಮೌನ ಶಿಖರಗಳ ಅರ್ಚಿಸುವ ಕನಸು!
ದೇಗುಲದ ಗಂಟೆಯಲಿ ನಾದಗಳ ಸವಿಯುತ್ತ
ಕಲ್ಲಾಗಿ ಬಿಡುವಂತ ಕಲೆಯ ಮನಸು!
ಕೈಯೆಡೆಗೆ ಕೈಚಾಚಿ ಹಿಡಿದ ಅಂಗೈಯಲ್ಲಿ
ಬೆಸೆದ ಬಾಂಧವ್ಯಗಳ ಮಧುರ ಕನಸು
ಮಾತಿಲ್ಲದೇ ನಡೆದ ಮೌನಾಂಧಕಾರದಲಿ
ಭಗವತಿಯ ಧ್ಯಾನಿಸುವ ಶುದ್ಧ ಮನಸು!
ಮತ್ತಷ್ಟು ಕನಸುಗಳ ಬುಟ್ಟಿ ಹೆಣೆಯುತ್ತ
ಈ ಬೆಳಗ ಬೆಳಕಲ್ಲಿ ನಲಿವ ಮನಸು!
ಭಾವದ ಹೊಸ್ತಿಲೊಳಗೆ ಹೂನಗೆಯಹಾಸುತ್ತ
ನಿನ್ನ ಬರಮಾಡಿಕೊಳ್ಳುವ ಪುಟ್ಟ ಕನಸು
