ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Monday, December 16, 2013

ಬೆಳಕಿನ ಪ್ರೇಮಿಗೆ.

ಹಗಲಿರುಳು ನಿನ್ನ ಧ್ಯಾನ
ಸಿಗದೆ ನನಗೆ ನಿನ್ನ ಪಾನ
ಉಸಿರಾಡಲಿ ಹೇಗೆ ಹೇಳು
ಉಸಿರಿಲ್ಲದ ಜೀವಗಾನ.

ಸರಸ ಸಂಜೆ ಇರುಳಾಯಿತು
ಬೆಳಗೆಲ್ಲವು ಜಡವಾಯಿತು
ವಿರಹವಿಂದು ಉರಿಯಾಯಿತು
ಬೆಳಕ ಮೋಹಕೆ!
ಸುಡುಬಿಸಿಲಿಗು ನೆರಳಾಗುವ
ಒಳಮನೆಯಲಿ ತಂಪೆನಿಸುವ
ಜಗಪ್ರೇಮಿಯೇ ಬರಬಾರದೆ
ಎನ್ನ ಹೃದಯಕೆ!

ಹೂ ಬಿಸಿಲಿನ ಬಿಸಿಯಪ್ಪುಗೆ
ಹಿಮಸಿಂಚನ ಸವಿಮುತ್ತಿಗೆ
ಅರಳೆಲೆಯಲಿ ಬಿರಿವ ಭಾವ
ನಿನ್ನ ಪ್ರೇಮಕೆ..
ನೀನಿಲ್ಲದೆ ನಾನಿಲ್ಲವೊ
ನಿನ್ನುಸಿರಲೆ ಈ ಜೀವವು
ಬಾ ಬದುಕಿಗೆ ಒಲವ ಹನಿಸಿ
ಜೀವಭಾವಕೆ..

8 comments:

  1. ಅಬ್ಬಾ!! ಹೆಣ್ಣಿನ ಹೃದಯದ ಪ್ರೀತಿಯಲ್ಲಿ ಅದೆಂಥದ ಭಾವಗಳಪ್ಪಾ...
    ತುಂಬಾ ಚಂದ ಚಂದದ ಸಾಲುಗಳು.....

    ಬೆಳಕಿನ ಪ್ರೇಮಿಗೆ ಅನ್ನೋ ತಲೆಬರಹವೂ ವಿಶೇಷವೆನಿಸತು......

    ಸಿರಿಯಕ್ಕಾ.... tooo supper....

    ReplyDelete
  2. ಸುಂದರ ಸಾಲುಗಳು.. ಜೀವ ಭಾವಕೆ ಒಲವ ಹನಿಸುವ ಹೂ ಬಿಸಿಲಿನ ಬಿಸಿಯಪ್ಪುಗೆ ಕೊಡುವ ಪ್ರೇಮಿಯ ಕಾಯುವಿಕೆಯಲ್ಲಿ ಹೇಳುವ ಅಂತರಾಳದ ಮಾತುಗಳು ಚನ್ನಾಗಿ ಮೂಡಿದೆ.

    ReplyDelete
  3. ಸಂಪೂರ್ಣ ಅರ್ಪಣಾಭಾವ ಅಕ್ಷರ ಅಕ್ಷರದಲ್ಲೂ ಮಿಳಿತವಾಗಿದೆ ಇಲ್ಲಿ.

    ReplyDelete
  4. ಚೆನ್ನಾದ ಕವನ ಸಿರಿ ಅಕ್ಕ..

    ಅಪರೂಪಕ್ಕೆ ನಿಮ್ಮ ಪ್ರಾಸಭರಿತ ಸಾಲುಗಳನ್ನ ಕಂಡದ್ದು.. ಇಷ್ಟ ಆಯ್ತು.

    ReplyDelete
  5. ಸುಡುಬಿಸಿಲಿಗು ನೆರಳಾಗುವ
    ಒಳಮನೆಯಲಿ ತಂಪೆನಿಸುವ
    ಜಗಪ್ರೇಮಿಯೇ ಬರಬಾರದೆ
    ಎನ್ನ ಹೃದಯಕೆ! beautiful lines..

    ReplyDelete
  6. Thumba channagide madam nimma kavana

    ReplyDelete
  7. ಎಲ್ಲರ ಪ್ರೀತಿಗೆ ಪ್ರತಿ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ಬರಹಕ್ಕೆ ಸ್ಪೂರ್ತಿ. ವಂದನೆಗಳು.

    ReplyDelete