ಅಂಗೈಯೊಳಗೊಂದು
ಚೈತ್ರಕಲ್ಪ.. ಶಿಲೆ.. ಹೂ... ದುಂಬಿ...
ಉಸಿರಾಗಿಸಿ ಜೀವತುಂಬಿ
ಹಾಡು ನೀ ಕೊಳಲು... ಹಾಡು...
ಬೆಳದಿಂಗಳು ಭಾವತುಂಬೀ....
ಜೀವದನಿಗೆ ರಾಗವಾದೆ
ಪ್ರೇಮಸಖೀ ಭಾವವಾದೆ
ಅವಗೆ ಬರಿದೆ ಪ್ರೇಮವಾದೆ
ರಾಧೆ.. ರಾಧೆ... ರಾಧೆ ನೀನು
ರಾಧೆಯಾದೆ.. ಮೀರೆಯಾದೆ...
ಚೈತ್ರಕಲ್ಪ.. ಶಿಲೆ.. ಹೂ... ದುಂಬಿ...
ಉಸಿರಾಗಿಸಿ ಜೀವತುಂಬಿ
ಹಾಡು ನೀ ಕೊಳಲು... ಹಾಡು...
ಬೆಳದಿಂಗಳು ಭಾವತುಂಬೀ....
ಜೀವದನಿಗೆ ರಾಗವಾದೆ
ಪ್ರೇಮಸಖೀ ಭಾವವಾದೆ
ಅವಗೆ ಬರಿದೆ ಪ್ರೇಮವಾದೆ
ರಾಧೆ.. ರಾಧೆ... ರಾಧೆ ನೀನು
ರಾಧೆಯಾದೆ.. ಮೀರೆಯಾದೆ...
ಕಲ್ಲು ಮಣ್ಣು ಸೃಷ್ಟಿಸೊಬಗು
ವೀಣೆ ಬೆರಳ ಮಿಡಿವ ಹಾಗೆ
ನದಿಯೂರಿನ ಮೋಹನನವ
ಅವನೆಂದರೆ ಹಾಗೆ ಹಾಗೆ
ದೀಪದೆದೆಯ ಜ್ಯೋತಿಹಾಗೆ
ಪ್ರೇಮಪಥದ ದೀಕ್ಷೆಪಡೆದ
ಜೋಗಿತಿಯದೇ ಜೋಳಿಗೆ
ಖಾಲಿ ಖಾಲಿ ನಡೆದುಬಿಡು
ಅವನಿಲ್ಲದ ದಾರಿಗೆ...
ಅವನೂರಿನ ಹಾದಿಗೆ.........