ಕಲ್ಲು ಮತ್ತು ಮೂರ್ತಿ
ರಾಧಾ " ಬೃಂದಾವನ" ದ ಬೆಳದಿಂಗಳಲ್ಲಿ ಕುಳಿತು ನಿರೀಕ್ಷೆಯಲ್ಲಿದ್ದಳು. ಮೈ ಹೆಪ್ಪುಗಟ್ಟುವ ಮಾಗಿ ಛಳಿ. ಅವಳ ದುಪ್ಪಟ್ಟಾ ಹಾರುತ್ತಿತ್ತು. ಬಿಗಿಯಾಗಿ ಹಿಡಿದಷ್ಟೂ. ಮನಸ್ಸಿನಂತೆ. ಜಾವ ಎರಡು ಕಳೆದರೂ ಪತ್ತೆಯಿಲ್ಲ. ಅಳುವಹಾಗೆನಿಸುತ್ತಿತ್ತು.ಅಳು ಬರುವ ಮುನ್ನ ಪ್ರೀತಿಯೆಂಬ ಪ್ರೀತಿ ಅವಳನ್ನು ಅಣಕಿಸುತ್ತಿತ್ತು.ನಿನಗೆ ವಿಶ್ವಾಸವಿಲ್ಲ ಅಲ್ಲವೇ? ಅನ್ನುತ್ತ. ಹಾಗೆ ನಂಬಲೂ ಅವಳಿಗೆ ಕಷ್ಟ. ಅವಳ ವಿಶ್ವಾಸವೇ ಅವಳ ಬದುಕು. ಅದೇ ಅವಳ ಬಲ. ಅದಿಲ್ಲವಾದರೆ ಅವಳಿಲ್ಲ.ಕೃಷ್ಣನ ಕೊಳಲು ರಾಧೆೆಗೋ ಗೋಪಿಕೆಯರಿಗೋ ಅವಳಿಗೂ ಅನುಮಾನವೇ. ಆದರೂ ರಾಧಾ ಮಾಧವನೆಂಬ ಅವಳ ಅಚಲ ನಂಬಿಕೆ........
ಮಾಗಿಯ ರಾತ್ರಿಗೆ ಬರುವ ನಲ್ಲನ ನಿರೀಕ್ಷೆಯ ಹೊತ್ತು ಅದೆಷ್ಟು ದಿನ ಕಳೆದಿದ್ದಳೋ....ಅಂತೂ ಬೃಂದಾವನಕ್ಕೆ ಅವನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಇಡೀ ಬೃಂದಾವನವೇ ಸಡಗರದಿಂದ ಸಿಂಗಾರಗೊಳ್ಳೋದು ನೋಡಿ ಮನಸ್ಸು ಚುರುಕ್ಕೆಂದಿತ್ತು! ಬಂದವನೇ ಅವ ವಿಶ್ರಮಿಸದೇ ಸತ್ಯಳ ಬಳಿ ನಡೆದಿದ್ದ. ಅವಳ ಕೋಪ ಹಾರಾಟ ಜಗತ್ತಗೇ ತಿಳಿದದ್ದು. ಆದರೂ ಕೃಷ್ಣ ಅವಳ ಮುನಿಸು ತಣಿಸಲು ಸದಾ ಅವಳ ಓಲೈಸುತ್ತಿದ್ದ.ಬೃಂದಾವನದಭಕ್ತರಿಗೆ ಮೀಸಲಾದವನು ಕೃಷ್ಣ! ಅವನು ಊರೆಲ್ಲ ವಿಚಾರಿಸಿ, ಅವನಿಗಾಗಿ ಕಾಯ್ದಿಟ್ಟ ಹಾಲು, ಮೊಸರು, ಅವಲಕ್ಕಿಗಳ ರುಚಿ ನೋಡದೇ ಎಲ್ಲಿ ಬರಬಿಡುವರು?ದೂರದಲ್ಲಿ ಜೋಗಿತ್ತಿಯೊಬ್ಬಳು ಹಾಡುತ್ತಾ ಹೋಗುತ್ತಿದ್ದಳು.ಅವಳ ಬಾಯಲ್ಲೂ ಅವನೇ........ ಜಾವ ಎರಡಾದರೂ ಅವನು ಬರಲೊಲ್ಲ. ಇನ್ನು ನಿರೀಕ್ಷೆ ಸುಮ್ಮನೇ ಅಂದುಕೊಂಡಳು......ಈಗಾಗಲೇ ಸುಸ್ತಾಗಿರುತ್ತಾನೆ. ದೂರದ ಪ್ರಯಾಣ ಮಾಡಿ ಬಂದಿರುವ ಅವನು ಯಾರ ಮನೆಯಲ್ಲೋ ಪಲ್ಲಂಗ ಸೇರಿದರೆ ಆಶ್ಚರ್ಯವೇನು? ಒಂದುವೇಳೆ ಬಂದರೂ ಅವನು ಮಾತನಾಡಬಲ್ಲನೇ? ಸುಮ್ಮನೇ ನಿರೀಕ್ಷೆ ಬಿಟ್ಟುಮಲಗೋಣ ಎಂದುಕೊಂಡು ಒಳಕೋಣೆಗೆ ನಡೆದಳು...
ಸುಖದ ಸುಪ್ಪತ್ತಿಗೆ... ರೇಶಿಮೆಯ ಹಾಸು, ಎತ್ತರವಾದ ಪಲ್ಲಂಗ.......ತನ್ನನ್ನು ಅಣಕಿಸಿದಂತೆ.....ರಾಧೆ ಬೆಚ್ಚಿದಳು. ಕಿಡಕಿಯಾಚೆ ಸುಖನಿದ್ರೆಯಲಿದ್ದ ಚಂದ್ರಮನ ಕಂಡು ನಿಡುಸುಯ್ದಳು. ಧರಿಸಿದ ಆಭರಣಗಳು ಮೈ ಯೆಲ್ಲ ಚುಚ್ಚುತ್ತಿರುವಂತೆನಿಸಿ ತೆಗೆದಿಟ್ಟಳು." ಕೃಷ್ಣಾ " ಅಂದುಕೊಂಡು ಕಣ್ಣು ಮುಚ್ಚಿದಳು.
ಅವಳಿಗೇನೂ ಹೊಸದಲ್ಲ ಅದು. ದಿನ ದಿನವೂ ಇದೇ ನಿರೀಕ್ಷೆಯೇ ಅವಳ ಬದುಕಾಗಿ ಬಿಟ್ಟಿದೆ. ಹೆಸರಿಗೆ ಪಟ್ಟದ ರಾಣಿ. ಬೃಂದಾವನದ ಹೆಂಗಳಿಯರಿಗೆಮಾಡಲು ಕೆಲಸವಾದರು ಇದೆ. ಅವಳಿಗೆ ಕೆಲಸಗಳೂ ಇಲ್ಲ. ಸಾಕ್ಷಾತ್ ಕೃಷ್ಣನ ಮನದನ್ನೆ ರಾಧೆಗೆ ಏನು ಕೆಲಸ? ಸಮಯ ಮಾತ್ರ ಅವಳನ್ನುಗೋಳು ಹುಯ್ದುಕೊಳ್ಳುತ್ತದೆ.ದೇವರ ಪೂಜೆಗೆ ಕುಳಿತರೆ ಸಾಕ್ಷಾತ್ ಕೃಷ್ಣನೇ ಬರದಿರುವಾಗ ಇನ್ಯಾವ ದೇವ ಬರಬಹುದು ಅನ್ನಿಸುತ್ತದೆ.ಅದು ಕಲ್ಲುಮೂರ್ತಿಯಾಗಿ ಕಾಣುತ್ತದೆ. ಅಲ್ಲ ಅವನುಳಿದು ಅನ್ಯವೇ ಇಲ್ಲದ ರಾಧೆ ಅವನೊಳಗೇ ಲೀನವಾದ ಮೀರಾ..... ಕಲ್ಲಿನ ದೇವರೆದುರು ನಿಂತರೆ !
ಪ್ರೀತಿ ಎಂಥ ಹಂಬಲ! ಅದರೊಳಗೆ ಅದೆಷ್ಟು ಸಹನೆ! ರಾಧೆಯ ಪ್ರೀತಿ ಕೃಷ್ಣನಿಗೆ ಅರ್ಥವಾದೀತಾ? ರಾಕ್ಷಸರುಗಳ ಕೊಲ್ಲುವಾಗ,ರಾಜ್ಯಗಳ ಗೆಲ್ಲುವಾಗ, ಧರ್ಮಯುದ್ಧ ಮಾಡುವಾಗ, ಜಗದ ಕಷ್ಟ ಪರಿಹರಿಸುವಾಗ ಯಾವತ್ತೂ ಕೃಷ್ಣ ಬರೀ ಕರ್ಮಯೋಗಿಯಾಗಿ ಕಾಣಿಸಿಕೊಂಡ.ಪ್ರೇಮವನ್ನು ಸಾರುವಾಗಲೂ ಅವನು ಗೋಪಿಕೆಯರನ್ನೇ ಬಳಸಿಕೊಂಡ. ಯಮುನೆಯ ತಟದಲ್ಲಿ ಕೃಷ್ಣನ ಕೊಳಲಿಗೆ ಮರುಳಾಗಿದ್ದು ರಾಧೆ ಮಾತ್ರಅಲ್ಲ!. ಹದಿನಾರು ಸಾವಿರ ಹೆಂಡತಿಯರ ಮನದಲ್ಲಿ ಮನೆಮಾಡಿ ಬಂದ ಕೃಷ್ಣನ ರಾಧೆ ಒಂದಿನಿತೂ ಮುನಿಸಿಲ್ಲದೇ ಲೋಕದ ಯಾವ ಭಯವಿಲ್ಲದೇಒಂದೇ ಪ್ರಶ್ನೆ ಕೇಳದೇ ಬರಮಾಡಿಕೊಳ್ಳುತ್ತಾಳೆ. ರಾಧೆ ಎಂತಹ ಅದ್ಭುತ ವ್ಯಕ್ತಿ! ನಮ್ಮೊಳಗೆ ಅವಳ ಸಾಮಾನ್ಯ ಬದುಕಿನ ನೋಟಗಳು ಕಾಣುವುದಿಲ್ಲಯಾಕೆ? ವನವಾಸ ಅನುಭವಿಸಿ ಬಂದ ಸೀತೆಗೆ ರಾಮ ಅಗ್ನಿಪರೀಕ್ಷೆ ನಡೆಸಿದ! ಜನರ ಮಾತಿಗೆ ಹೆದರಿ! ಆದರೆ ರಾಧೆ ಯಾವತ್ತೂ ಕೃಷ್ಣನ ಪರೀಕ್ಷಿಸಲೇ ಇಲ್ಲ.ಪಾರಿಜಾತವಾಗಲೀ, ದೂರ್ವೆಯಾಗಲೀ ಅವಳ ಪ್ರೀತಿಯ ಮುಂದೆ ಎಲ್ಲವೂ ತೃಣವೇ. ಎಂಥಹ ನಿರ್ಮಲ ಆರಾಧನೆ ಅದು? ಭಕ್ತಿಗೆ ಪ್ರೀತಿಗೆ ರಾಧೆ ಒಬ್ಬಳೇ ಸಾಕು. ಅವಳ ಮನದಲ್ಲಿ ಎಂಥಹ ನೋವಿದ್ದರೂ ಅವಳು ಅದನ್ನೆಲ್ಲ ಮೀರಿ ನಿಲ್ಲುವ ಮೂರ್ತಿಯಾಗಿಬಿಡುತ್ತಾಳೆ.ಕೃಷ್ಣ ಕಲ್ಲಾಗಿಬಿಡುತ್ತಾನೆ.! ಕೃಷ್ಣ ರಾಧೆಯ ಪ್ರೇಮ ನಮ್ಮಂತ ಪಾಮರರಿಗೆ ನಿಲುಕದ್ದಿರಬಹುದು. ಆದರೆ. ಲೋಕದ ಕಣ್ಣಿಗೆ ರಾಧೆಯೂ ಕೂಡ ಎಲ್ಲರ ಹಾಗೆಹೆಣ್ಣು