ವಿಚಿತ್ರ ತಳಮಳಗಳು.
ಒಂದೆರಡು ಬಿರುದುಗಳೇ
ಈ ಬದುಕಿಗೆ!
ಒಮ್ಮೆ ಸ್ವಾಥರ್ಿ
ಇನ್ನೊಮ್ಮೆ ಅಹಂಕಾರಿ,
ಮತ್ತೊಮ್ಮೆ
ಹುಚ್ಚಿ,
ಇನ್ನೊಮ್ಮೆ
ಇನ್ನೇನೋ..
ಆಚೆಗೆ,
ಒಳಗೇನಿದೆ ನಿಜವಾಗಿ?
ಗೊಂದಲ
ಒಳಗೊಳಗೇ ಪ್ರಶ್ನೆ
ಇಷ್ಟೆಲ್ಲ ಬಿರುದುಗಳೊಂದಿಗೆ
ಏನಿದೆ ನನ್ನಲ್ಲಿ?
ನನಗಾಗಿ?
ನಾಳೆಗೆ ಕನಸು
ನಿನ್ನೆಯ ನೆನಪು
ಇಂದಿಗೆ ಹಂಗಿಲ್ಲದ
ಬದುಕು
ಯಾರೊಳಗಿಲ್ಲ?
ಅಲೆಮಾರಿ
ಜೋಗಿತಿಯ ಜೋಳಿಗೆಯ
ಒಳಗೆ ಉಳಿದಿದ್ದೇನು?
ಖಾಲಿ
ಖಾಲಿ
ಖಾಲಿ