ನಕ್ಷತ್ರಗಳೇ ........
> ನಕ್ಷತ್ರಗಳೇ ನಿಮಗೆ ಅಮಾವಾಸ್ಯೆಯಿಲ್ಲ
> ಬೆಳದಿಂಗಳಂತೆ ಬರಿದಾಗೋದಿಲ್ಲ
> ಬೆಳಕಿನ ಖನಿಗಳು ನೀವು
> ಕಣ್ಣು ಕುಕ್ಕುವುದಿಲ್ಲ
> ಕತ್ತಲೆಯ ರಾತ್ರಿಗಳ
> ತಣಿಸುತ್ತೀರಿ.
> ಮತ್ತೆ ಮನಗಳ
> ಮುದ್ದಿಸುತ್ತೀರಿ.
> ಎಲ್ಲ ನೋವುಗಳಿಗೆ
> ಸಾಕ್ಷಿಯಾಗುತ್ತ
> ನಿಮ್ಮದೇ ಬೆಳಕಲ್ಲಿ
> ಕರಗುತ್ತ..........
>
>
> ಶಬ್ಧಗಳಿಗ್ಯಾಕೆ ಈ ಪರಿಯ
> ದಾಹ!
> ಹೇಳಿ ಗೆಳೆಯರೆ
> ಇವಕೆ ಏಕಿಂತ ಮೋಹ!
> ಮನದೆಲ್ಲ ಒಳಗುಗಳ
> ಬಿಚ್ಚಿಡುವ ಬಯಕೆ!
> ಗೊತ್ತಿಲ್ಲ,- ಬೆಳದಿಂಗಳೆ ನಾಳೆ
> ಕತ್ತಲೆಯ ಗೂಡ ಸೇರಿ
> ಮಾಡುವುದೇ ಅರಿಕೆ!
>
> ಜೋಳಿಗೆಯ ತುಂಬೆಲ್ಲ
> ನಿನ್ನದೇ ಹೊಳಪಿರಲಿ.
> ಕಡುರಾತ್ರಿಯಲ್ಲೂ ನೀ ನನ್ನ
> ಜೊತೆಯಿರಲಿ!
> ಅಳುವ ಚಂದ್ರಮಂಗೂ
> ನಗುವ ಬೆಳದಿಂಗಳಿಗೂ
> ನಕ್ಷತ್ರಗಳೇ
> ಜೊತೆಯಾಗಿ....
> ಬೆಳಕಾಗಿ.......