ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Friday, November 8, 2013

ಶರಣೆ

ತುಂಬಾ ಸೋತಾಗೆಲ್ಲ ನಿನ್ನ ಹಂಬಲವೇಕೆ?
ನನ್ನ ಕಂಬನಿಗೆಲ್ಲ ನೀನೆ ಕಾರಣವೇಕೆ?

ಏನು ತಪ್ಪಿದೆ ಹೇಳು
ಭಾವದಲ್ಲಿ
ಎನ್ನ ಶರಣಾಗತಿಗೆ
ನೀನೇ ಇಲ್ಲಿ.

ಅರಿವು,ಗುರುವುಗಳೆಲ್ಲ
ನೀನೆ ತಾನೆ?
ಕೃಷ್ಣ ನಿನ್ನಡಿಯಲ್ಲಿ
ನಾನು ಶರಣೆ.

11 comments:

  1. ಚಿಕ್ಕದಾದ ಭಾವದಲ್ಲಿ ಇಂಚು ತಪ್ಪದ ಪ್ರಶ್ನೆಗಳು ಸುಂದರವಾಗಿದೆ.

    ReplyDelete
  2. ಸಂಪೂರ್ಣ ಶರಣಾಗತಿಯ ಭಾವಾರ್ಪಣ.

    ReplyDelete
  3. ಧನ್ಯವಾದಗಳು ಪ್ರದೀಪ್, ವಿನಾಯಕ್ ಹಾಗೂ ಬದರಿ ಸರ್ ಅವರಿಗೆ..

    ReplyDelete
  4. ಚಂದದ ಭಾವ..ಪುಟ್ಟ ಸಾಲಿನಲ್ಲಿದೆ ಪುಟಗಟ್ಟಲೇ ಬರೆಯೋ ಭಾವಗಳು.
    ಇಷ್ಟವಾಯ್ತು

    ReplyDelete
  5. ಧನ್ಯವಾದಗಳು ಎಲ್ಲರಿಗೂ.. :)

    ReplyDelete