ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, March 12, 2014

ಋಣ

ಈ ಕಣ್ಣಲ್ಲಿ ಹನಿ ನೀರಿಲ್ಲ!
ಯಾರಿಗಾಗಿಯೂ
ಯಾವುದಕ್ಕಾಗಿಯೂ
ಬರೀ ಋಣಗಳು
ತುಂಬಿಕೊಂಡಿವೆ!
ಜನ್ಮಾಂತರದ ಋಣಗಳು
ಅದಕ್ಕಾಗೇ ಸುರಿದಿವೆ ಕಂಗಳು
ಯಾವ ತಡೆಗೂ ನಿಲ್ಲದೇ
ಯಾರ ಕರೆಯೂ ಕೇಳದೆ..
ಈ ಕಂಗಳಲ್ಲಿ ಚೂರು ಬೆಳಕಿಲ್ಲ!
ಕತ್ತಲೆಯ ಸಂಗವೇ
ಹಿತವಾಗಿದೆ.
ಬೆಳಕಿನ ಋಣಕ್ಕೆ ಕರಗುತ್ತಿವೆ!
ಕೈಎತ್ತಿ ಕೊಟ್ಟ
ಆನಂದಕ್ಕೆಲ್ಲ
ಋಣವಿಳಿಸ ಹೊರಟಿವೆ
ಕತ್ತಲೆಯ ಕಂಗಳು..
ಮೋಡದೆದೆಯಲ್ಲಿ
ಚಂದ್ರ ಸಂತೈಸಲಿ
ಕರಗಲಿ ಆನಂದದ
ಋಣಗಳೆಲ್ಲ..

3 comments:

  1. ಋಣದ ಹಂಗಿಲ್ಲದೆ ತೃಣವು ಇಲ್ಲ ಎನ್ನುವ ಮಾತಿನಂತೆ.. ಸುಂದರ ಪದಗಳ ಮೆರವಣಿಗೆಯನ್ನು ಹೊತ್ತಿರುವ ಭಾವಗಳ ರಾಶಿ ಮನಸ್ಸಿಗೆ ಹತ್ತಿರವಾಗುತ್ತಿದೆ
    ಸುಂದರ ಕವನ ಇಷ್ಟವಾಯಿತು

    ReplyDelete
  2. ಕತ್ತಲೆಯ ಸಂಗವೇ ಹಿತವಾಗಿದೆ....
    ಬೆಳಕಿನ ..............

    ಚಂದದ ಸಾಲು... ಪಗದಳ ಜೋಡಣೆ ಮುತ್ತು....

    ReplyDelete
  3. ಧನ್ಯವಾದಗಳು ಶ್ರೀಕಾಂತ್ ಸರ್ ಹಾಗೂ ರಾಘವ ಭಟ್ರಿಗೆ..

    ReplyDelete