ಈ ಕಣ್ಣಲ್ಲಿ ಹನಿ ನೀರಿಲ್ಲ!
ಯಾರಿಗಾಗಿಯೂ
ಯಾವುದಕ್ಕಾಗಿಯೂ
ಬರೀ ಋಣಗಳು
ತುಂಬಿಕೊಂಡಿವೆ!
ಜನ್ಮಾಂತರದ ಋಣಗಳು
ಅದಕ್ಕಾಗೇ ಸುರಿದಿವೆ ಕಂಗಳು
ಯಾವ ತಡೆಗೂ ನಿಲ್ಲದೇ
ಯಾರ ಕರೆಯೂ ಕೇಳದೆ..
ಯಾರಿಗಾಗಿಯೂ
ಯಾವುದಕ್ಕಾಗಿಯೂ
ಬರೀ ಋಣಗಳು
ತುಂಬಿಕೊಂಡಿವೆ!
ಜನ್ಮಾಂತರದ ಋಣಗಳು
ಅದಕ್ಕಾಗೇ ಸುರಿದಿವೆ ಕಂಗಳು
ಯಾವ ತಡೆಗೂ ನಿಲ್ಲದೇ
ಯಾರ ಕರೆಯೂ ಕೇಳದೆ..
ಈ ಕಂಗಳಲ್ಲಿ ಚೂರು ಬೆಳಕಿಲ್ಲ!
ಕತ್ತಲೆಯ ಸಂಗವೇ
ಹಿತವಾಗಿದೆ.
ಬೆಳಕಿನ ಋಣಕ್ಕೆ ಕರಗುತ್ತಿವೆ!
ಕೈಎತ್ತಿ ಕೊಟ್ಟ
ಆನಂದಕ್ಕೆಲ್ಲ
ಋಣವಿಳಿಸ ಹೊರಟಿವೆ
ಕತ್ತಲೆಯ ಕಂಗಳು..
ಕತ್ತಲೆಯ ಸಂಗವೇ
ಹಿತವಾಗಿದೆ.
ಬೆಳಕಿನ ಋಣಕ್ಕೆ ಕರಗುತ್ತಿವೆ!
ಕೈಎತ್ತಿ ಕೊಟ್ಟ
ಆನಂದಕ್ಕೆಲ್ಲ
ಋಣವಿಳಿಸ ಹೊರಟಿವೆ
ಕತ್ತಲೆಯ ಕಂಗಳು..
ಮೋಡದೆದೆಯಲ್ಲಿ
ಚಂದ್ರ ಸಂತೈಸಲಿ
ಕರಗಲಿ ಆನಂದದ
ಋಣಗಳೆಲ್ಲ..
ಚಂದ್ರ ಸಂತೈಸಲಿ
ಕರಗಲಿ ಆನಂದದ
ಋಣಗಳೆಲ್ಲ..
ಋಣದ ಹಂಗಿಲ್ಲದೆ ತೃಣವು ಇಲ್ಲ ಎನ್ನುವ ಮಾತಿನಂತೆ.. ಸುಂದರ ಪದಗಳ ಮೆರವಣಿಗೆಯನ್ನು ಹೊತ್ತಿರುವ ಭಾವಗಳ ರಾಶಿ ಮನಸ್ಸಿಗೆ ಹತ್ತಿರವಾಗುತ್ತಿದೆ
ReplyDeleteಸುಂದರ ಕವನ ಇಷ್ಟವಾಯಿತು
ಕತ್ತಲೆಯ ಸಂಗವೇ ಹಿತವಾಗಿದೆ....
ReplyDeleteಬೆಳಕಿನ ..............
ಚಂದದ ಸಾಲು... ಪಗದಳ ಜೋಡಣೆ ಮುತ್ತು....
ಧನ್ಯವಾದಗಳು ಶ್ರೀಕಾಂತ್ ಸರ್ ಹಾಗೂ ರಾಘವ ಭಟ್ರಿಗೆ..
ReplyDelete