ಹಗಲಿರುಳು ನಿನ್ನ ಧ್ಯಾನ
ಸಿಗದೆ ನನಗೆ ನಿನ್ನ ಪಾನ
ಉಸಿರಾಡಲಿ ಹೇಗೆ ಹೇಳು
ಉಸಿರಿಲ್ಲದ ಜೀವಗಾನ.
ಸರಸ ಸಂಜೆ ಇರುಳಾಯಿತು
ಬೆಳಗೆಲ್ಲವು ಜಡವಾಯಿತು
ವಿರಹವಿಂದು ಉರಿಯಾಯಿತು
ಬೆಳಕ ಮೋಹಕೆ!
ಸುಡುಬಿಸಿಲಿಗು ನೆರಳಾಗುವ
ಒಳಮನೆಯಲಿ ತಂಪೆನಿಸುವ
ಜಗಪ್ರೇಮಿಯೇ ಬರಬಾರದೆ
ಎನ್ನ ಹೃದಯಕೆ!
ಹೂ ಬಿಸಿಲಿನ ಬಿಸಿಯಪ್ಪುಗೆ
ಹಿಮಸಿಂಚನ ಸವಿಮುತ್ತಿಗೆ
ಅರಳೆಲೆಯಲಿ ಬಿರಿವ ಭಾವ
ನಿನ್ನ ಪ್ರೇಮಕೆ..
ನೀನಿಲ್ಲದೆ ನಾನಿಲ್ಲವೊ
ನಿನ್ನುಸಿರಲೆ ಈ ಜೀವವು
ಬಾ ಬದುಕಿಗೆ ಒಲವ ಹನಿಸಿ
ಜೀವಭಾವಕೆ..
ಸಿಗದೆ ನನಗೆ ನಿನ್ನ ಪಾನ
ಉಸಿರಾಡಲಿ ಹೇಗೆ ಹೇಳು
ಉಸಿರಿಲ್ಲದ ಜೀವಗಾನ.
ಸರಸ ಸಂಜೆ ಇರುಳಾಯಿತು
ಬೆಳಗೆಲ್ಲವು ಜಡವಾಯಿತು
ವಿರಹವಿಂದು ಉರಿಯಾಯಿತು
ಬೆಳಕ ಮೋಹಕೆ!
ಸುಡುಬಿಸಿಲಿಗು ನೆರಳಾಗುವ
ಒಳಮನೆಯಲಿ ತಂಪೆನಿಸುವ
ಜಗಪ್ರೇಮಿಯೇ ಬರಬಾರದೆ
ಎನ್ನ ಹೃದಯಕೆ!
ಹೂ ಬಿಸಿಲಿನ ಬಿಸಿಯಪ್ಪುಗೆ
ಹಿಮಸಿಂಚನ ಸವಿಮುತ್ತಿಗೆ
ಅರಳೆಲೆಯಲಿ ಬಿರಿವ ಭಾವ
ನಿನ್ನ ಪ್ರೇಮಕೆ..
ನೀನಿಲ್ಲದೆ ನಾನಿಲ್ಲವೊ
ನಿನ್ನುಸಿರಲೆ ಈ ಜೀವವು
ಬಾ ಬದುಕಿಗೆ ಒಲವ ಹನಿಸಿ
ಜೀವಭಾವಕೆ..
ಅಬ್ಬಾ!! ಹೆಣ್ಣಿನ ಹೃದಯದ ಪ್ರೀತಿಯಲ್ಲಿ ಅದೆಂಥದ ಭಾವಗಳಪ್ಪಾ...
ReplyDeleteತುಂಬಾ ಚಂದ ಚಂದದ ಸಾಲುಗಳು.....
ಬೆಳಕಿನ ಪ್ರೇಮಿಗೆ ಅನ್ನೋ ತಲೆಬರಹವೂ ವಿಶೇಷವೆನಿಸತು......
ಸಿರಿಯಕ್ಕಾ.... tooo supper....
ಸುಂದರ ಸಾಲುಗಳು.. ಜೀವ ಭಾವಕೆ ಒಲವ ಹನಿಸುವ ಹೂ ಬಿಸಿಲಿನ ಬಿಸಿಯಪ್ಪುಗೆ ಕೊಡುವ ಪ್ರೇಮಿಯ ಕಾಯುವಿಕೆಯಲ್ಲಿ ಹೇಳುವ ಅಂತರಾಳದ ಮಾತುಗಳು ಚನ್ನಾಗಿ ಮೂಡಿದೆ.
ReplyDeleteಚಂದವೇ.......:)
ReplyDeleteಸಂಪೂರ್ಣ ಅರ್ಪಣಾಭಾವ ಅಕ್ಷರ ಅಕ್ಷರದಲ್ಲೂ ಮಿಳಿತವಾಗಿದೆ ಇಲ್ಲಿ.
ReplyDeleteಚೆನ್ನಾದ ಕವನ ಸಿರಿ ಅಕ್ಕ..
ReplyDeleteಅಪರೂಪಕ್ಕೆ ನಿಮ್ಮ ಪ್ರಾಸಭರಿತ ಸಾಲುಗಳನ್ನ ಕಂಡದ್ದು.. ಇಷ್ಟ ಆಯ್ತು.
ಸುಡುಬಿಸಿಲಿಗು ನೆರಳಾಗುವ
ReplyDeleteಒಳಮನೆಯಲಿ ತಂಪೆನಿಸುವ
ಜಗಪ್ರೇಮಿಯೇ ಬರಬಾರದೆ
ಎನ್ನ ಹೃದಯಕೆ! beautiful lines..
Thumba channagide madam nimma kavana
ReplyDeleteಎಲ್ಲರ ಪ್ರೀತಿಗೆ ಪ್ರತಿ ಅನಿಸಿಕೆಗಳಿಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ಬರಹಕ್ಕೆ ಸ್ಪೂರ್ತಿ. ವಂದನೆಗಳು.
ReplyDelete