![]() |
| ಚಿತ್ರ ಕೃಪೆ:ಅಂತರ್ಜಾಲ |
ನನ್ನ ಸರಿದ ಕಾಲದಂಚುಗಳ
ನೆರಿಗೆ ಕಟ್ಟಲಾರೆ ನೀನು!
ನನ್ನ ತೋಳತೊರೆದು ಹೋದ
ನಗುವ ನಗಿಸಲಾರೆ ನೀನು!
ಸೆರಗಿನಂಚಿನಲ್ಲಿ ಜೋಡಿಸಿಟ್ಟ
ಮುತ್ತು ಮಣಿಗಳ ಹಾಗೆ
ಜೋಪಾನ ಮಾಡಿದೆ ನಿನ್ನ
ನೀ ನನ್ನೆದೆಯನ್ನೆ
ಮುಚ್ಚಿಟ್ಟುಕೊಳ್ಳದಾದೆ!
ನನ್ನ ಕಣ್ಣೆವೆಗಳಲ್ಲಿ
ಕಾಂತಿಯಾಗಿಸಿಕೊಂಡೆ
ಗೆಳೆಯಾ ನೀ ಬೆಳಕಿಲ್ಲದ
ನೆರಳಲ್ಲಿ ನನ್ನ ಬಿಟ್ಟು ಹೋದೆ!
ಕಾಲದಲ್ಲಿ
ಅರಳಿದ ಹೂಗಳೆಲ್ಲ
ನಿನ್ನ ಆಗಮನಕ್ಕೆ ಕಾಯುವುದಿಲ್ಲ!
ನಾಳೆಗಳ ನಿರೀಕ್ಷೆ
ಬಾಡಿ ಉದುರುವುದನ್ನು
ತಡೆಯುವುದಿಲ್ಲ!
ಮತ್ತೆ ನಾಳೆಗಳು ನಮ್ಮವಲ್ಲ!
ನೆನಪ ನಾವೆಗೆ ಕಟ್ಟಿ ಹೋದ
ಹಗಲುಗನಸುಗಳು!
ನಮ್ಮವಾಗುವುದಿಲ್ಲ!
ಅದಕ್ಕೆಂದೇ ಕನಸು ಕಾಣುವುದಿಲ್ಲ!
ನೀ ಬರುವುದೂ ಇಲ್ಲ.!!

ಆವ ಬರದೇ ಇರಬಹುದು ಆದರೆ ನಾಳೆಗಳು ನಮ್ಮವಲ್ಲವೇ ? :)
ReplyDeleteಚೆನ್ನಾಗಿದೆ
ನಿಜ. ಅವನಿಲ್ಲದ ನಾಳೆಗಳು ನನ್ನವು!! ಇವತ್ತಿಲ್ಲದವನು ನಾಳೆ ಬರುತ್ತಾನೆಂಬ ಕನಸುಗಳಿಗಿಂತ ಇರುವ ನನ್ನ ನಾಳೆಗಳ ನಮ್ಮದಾಗಿಸಿಕೊಳ್ಳುವ ಹಂಬಲದೊಂದಿಗೆ ಕವಿತೆಯ ಆಶಯವಿದೆ. ಧನ್ಯವಾದಗಳು ಸ್ವರ್ಣ ಅವರೆ...
ReplyDeletethumba chennaagide
ReplyDeleteಸಿರಿ ಅಕ್ಕ.. ಕವನಕ್ಕೆ ಮೊದಲಿಗೊಂದು ಸೂಪರ್ ಲೈಕ್.. :) :)
ReplyDeleteಕವನದೊಳಗಿನ ಭಾವ.. ಅದರೊಳಗಿನ ಜೀವ.. ಬಹಳ ಇಷ್ಟ ಆಯ್ತು..
ನೀವು ಆ ಭಾವಗಳನ್ನ ಪದಕ್ಕಿಳಿಸಿ ನಿರೂಪಿಸಿರೋ ರೀತಿ ಅತಿ ಸುಂದರ..
ಬಹಳ ಇಷ್ಟ ಆಯ್ತು.. :) :)
ತುಂಬಾ ತುಂಬಾ ಧನ್ಯವಾದಗಳು ಪದ್ಮಾ ಮತ್ತು ಸತೀಶ್ ಅವರಿಗೆ.
ReplyDelete