ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Thursday, December 27, 2012

ಅರ್ಪಣೆ

ಚಿತ್ರಕೃಪೆ: ಅಂತರ್ಜಾಲ



ನಿನಗಾಗಿ ನಾನೇಕೆ
ಅಡಿಗಡಿಗೆ ಹಂಬಲಿಸಿ
ಕಾಯುತ್ತಿರುವೆ?
ಕೃಷ್ಣ ನಿನ್ನಡಿಯಲ್ಲಿ
ಕನವರಿಸಿ ಕನವರಿಸಿ
ಕರಗುತ್ತಿರುವೆ?


ಮನಸಾಗಿ ರಾಜಿಸಿದ ನೀ
ಯಾಕೆ ಮರೆತಿರುವೆ
ಮನದ ಈ ನುಡಿಗಳಿಗೆ
ದನಿಯಾಗಬಿಡದೇ?
ನನ್ನ ದನಿಗೊಮ್ಮೆಯೂ
ಕಿವಿಯಾಗದೆ?

ಎಡಬಿಡದೇ ದಣಿದಿರುವ
ದಿನಕಿಲ್ಲ ನಿದ್ರೆ!
ಕನಸಲ್ಲಿ ಕಾಡುವುದು
ನಿನ್ನದೇ ಮುದ್ರೆ!

ನೀನೇಕೆ ನನ್ನ ಒಳಗುಡಿಯ
ಸೇರಿದೆ?
ನೀನಿಲ್ಲದೀದಿನಕು
ನನ್ನೊಳಗು ಅಳುತಿದೆ
ಹೇಗೆ ಹೇಳಲಿ ಮನವೇ
ಕೊಳಲ ಪರಿ ಜೀವ!

ಒಳಗಿನುಸಿರೆ ಜೀವ!
ಬೆರಳ ನೇವರಿಸಿ
ನೀ ನುಡಿಸದಿರೆ
ನಾದವೆಲ್ಲಿಂದ ತರಲಿಹೇಳು?
ನೀ ಉಸಿರ ಭಾವದಲಿ
ನನ್ನದೆಯ ಜೀವದಲಿ
ಇಷ್ಟು ಸಾಕಲ್ಲ
ಕೃಷ್ಣ ಬಾಳು!


10 comments:

  1. >>ಎಡಬಿಡದೇ ದಣಿದಿರುವ
    ದಿನಕಿಲ್ಲ ನಿದ್ರೆ!
    ಕನಸಲ್ಲಿ ಕಾಡುವುದು
    ನಿನ್ನದೇ ಮುದ್ರೆ! <<
    ಚೆನ್ನಾಗಿದ್ದು ಕವನ :-)

    ReplyDelete
  2. Dhanyavadagalu prashasti hagu shridhar avarige...

    ReplyDelete
  3. ಎಡಬಿಡದೇ ದಣಿದಿರುವ
    ದಿನಕಿಲ್ಲ ನಿದ್ರೆ!
    ಕನಸಲ್ಲಿ ಕಾಡುವುದು
    ನಿನ್ನದೇ ಮುದ್ರೆ!

    ಒಳಗಿನುಸಿರೆ ಜೀವ!
    ಬೆರಳ ನೇವರಿಸಿ
    ನೀ ನುಡಿಸದಿರೆ
    ನಾದವೆಲ್ಲಿಂದ ತರಲಿಹೇಳು?
    ನೀ ಉಸಿರ ಭಾವದಲಿ
    ನನ್ನದೆಯ ಜೀವದಲಿ
    ಇಷ್ಟು ಸಾಕಲ್ಲ
    ಕೃಷ್ಣ ಬಾಳು....

    ಸುಂದರವಾದ ಸಾಲುಗಳು.. ತುಂಬಾ ಇಷ್ಟ ಆಯಿತು ಈ ಕವನ....

    ReplyDelete
  4. Tumbaaa Danyavaadagalu Ashok shettyyvare...

    ReplyDelete
  5. ಸಿರಿ ಅಕ್ಕ ಮತ್ತೊಂದು ಚೆಂದದ ಕವನ. ಇಷ್ಟ ಆಯ್ತು. :)

    ReplyDelete
  6. ಧನ್ಯವಾದಗಳು ಸತೀಶ್...ನಿಮ್ಮ ಸಲಹೆ ಸೂಚನೆ ವಿಮರ್ಶೆಗಳೂ ಇರಲಿ ಕವಿತೆಗಳಿಗೆ..

    ReplyDelete
  7. ಅನನ್ಯ ಅರ್ಪಣಾ ಭಾವದ ಸಾಲುಗಳು
    'ನೀ ನುಡಿಸದಿರೆ
    ನಾದವೆಲ್ಲಿಂದ ತರಲಿಹೇಳು?'
    ವಾವ್ ಒಳ್ಳೆಯ ಬ್ಲಾಗಿನ ಪರಿಚಯವಾಯಿತು.

    ReplyDelete
  8. tumba tumbaa dhanyavadagalu Badari Sir

    ReplyDelete
  9. ಇಷ್ಟವಾಯ್ತೀ ಭಾವ

    ReplyDelete