ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, October 1, 2014

ಶ್ರದ್ಧಾಂಜಲಿ ಸಭೆ

 


 ಬರೆಯಬೇಕೆನ್ನುವ ನನ್ನ ತವಕಗಳಿಗೆ,
 ಬೆರಗು ಬೆರಗಿನ ಕಣ್ಣಾದ ನಿನಗೆ,
 ಮತ್ತು ಮರೆತ ನಿನ್ನೆಗಳಿಗೆ,
 ಹೀಗೊಂದು
 ಕಂಬನಿಯ ಶೃದ್ಧಾಂಜಲಿ ಸಭೆ
 ಏರ್ಪಡಿಸಿಕೊಂಡಿದ್ದೇನೆ.
 ನನಗೆ ಮತ್ತು
 ನನ್ನೊಳಗಿನ  ಎಲ್ಲ ನಿನ್ನೆಗಳಿಗೆ..


ಕಂಡರಿಯದ ಕಾಡುವಿಕೆಯ,
ಘಳಿಗೆಯೊಡನೆ
ಸುಖದ ತಾಪ ಸುಡುತಿರೆ,
ಮತ್ತನೊಳಗೆ
ಸುಡುವ ಕೋಪ...
ರಮಿಸುವಂತ
ಮಗುವಿನೊಲವ
ಮನಸುಗಳಿಗೆ..


ಸೋತ ಸೆರಗಿನಲ್ಲಿ
ಬಿಸಿಯನೆಬ್ಬಿಸುವ ಗೆಳೆಯ
ಕನಸು ಕನಸಿನಲ್ಲೇ ಕಾಡಿ
ಹುಸಿಮುನಿಸಿನ
ಹೃದಯದೊಡೆಯ
ಕ್ಷಣಕ್ಷಣವನು ಹಸಿರಾಗಿಸಿ
ಕಳೆದುಹೋದ
ಜೀವಗಳಿಗೆ....

ಶ್ರದ್ಧಾಂಜಲಿ ಸಭೆಯಿದು.
ನನ್ನದು.. ನನ್ನದು ...
ನನ್ನದು ಮಾತ್ರ..








6 comments:

  1. ಧನ್ಯವಾದ ಗುರುಗಳೇ..

    ReplyDelete
  2. ಸಭೆ ನನ್ನೊಳಗೂ ನಡೆಯುತಿದೆ.....
    ಚಂದ ಭಾವ ಬರಹ...

    ReplyDelete
  3. ಎಲ್ಲರೊಳಗೂ ನಡೆಯುತ್ತಿರಬಹುದು ನಿನ್ನೆಗಳಿಗೊಂದು ಇಂತ ಸಭೆ ಅಲ್ಲವಾ ಶ್ರೀವತ್ಸ? ಥ್ಯಾಂಕ್ಯೂ.

    ReplyDelete
  4. 'ನನಗೆ ಮತ್ತು
    ನನ್ನೊಳಗಿನ ಎಲ್ಲ ನಿನ್ನೆಗಳಿಗೆ..'
    ನಮ್ಮದೂ xeroxಊ...

    ReplyDelete