ಬರೆಯಬೇಕೆನ್ನುವ ನನ್ನ ತವಕಗಳಿಗೆ,
ಬೆರಗು ಬೆರಗಿನ ಕಣ್ಣಾದ ನಿನಗೆ,
ಮತ್ತು ಮರೆತ ನಿನ್ನೆಗಳಿಗೆ,
ಹೀಗೊಂದು
ಕಂಬನಿಯ ಶೃದ್ಧಾಂಜಲಿ ಸಭೆ
ಏರ್ಪಡಿಸಿಕೊಂಡಿದ್ದೇನೆ.
ನನಗೆ ಮತ್ತು
ನನ್ನೊಳಗಿನ ಎಲ್ಲ ನಿನ್ನೆಗಳಿಗೆ..
ಕಂಡರಿಯದ ಕಾಡುವಿಕೆಯ,
ಘಳಿಗೆಯೊಡನೆ
ಸುಖದ ತಾಪ ಸುಡುತಿರೆ,
ಮತ್ತನೊಳಗೆ
ಸುಡುವ ಕೋಪ...
ರಮಿಸುವಂತ
ಮಗುವಿನೊಲವ
ಮನಸುಗಳಿಗೆ..
ಸೋತ ಸೆರಗಿನಲ್ಲಿ
ಬಿಸಿಯನೆಬ್ಬಿಸುವ ಗೆಳೆಯ
ಕನಸು ಕನಸಿನಲ್ಲೇ ಕಾಡಿ
ಹುಸಿಮುನಿಸಿನ
ಹೃದಯದೊಡೆಯ
ಕ್ಷಣಕ್ಷಣವನು ಹಸಿರಾಗಿಸಿ
ಕಳೆದುಹೋದ
ಜೀವಗಳಿಗೆ....
ಶ್ರದ್ಧಾಂಜಲಿ ಸಭೆಯಿದು.
ನನ್ನದು.. ನನ್ನದು ...
ನನ್ನದು ಮಾತ್ರ..
ಚೆನ್ನಾಗಿದೆ
ReplyDeleteಧನ್ಯವಾದ ಗುರುಗಳೇ..
ReplyDeleteಸಭೆ ನನ್ನೊಳಗೂ ನಡೆಯುತಿದೆ.....
ReplyDeleteಚಂದ ಭಾವ ಬರಹ...
ಎಲ್ಲರೊಳಗೂ ನಡೆಯುತ್ತಿರಬಹುದು ನಿನ್ನೆಗಳಿಗೊಂದು ಇಂತ ಸಭೆ ಅಲ್ಲವಾ ಶ್ರೀವತ್ಸ? ಥ್ಯಾಂಕ್ಯೂ.
ReplyDelete'ನನಗೆ ಮತ್ತು
ReplyDeleteನನ್ನೊಳಗಿನ ಎಲ್ಲ ನಿನ್ನೆಗಳಿಗೆ..'
ನಮ್ಮದೂ xeroxಊ...
:)
ReplyDelete