ಅಳಿವು ಉಳಿವಿನ ಸ್ಥಬ್ಧಚಿತ್ರಕೆ
ಮಾತು ಮೌನದ ನೆಲೆಯೆಲ್ಲಿ?
ಹುಟ್ಟು ಸಾವಿನ ಸೃಷ್ಟಿಚಿತ್ತಕೆ
ನಾನು ನೀನು ಕೊನೆಯೆಲ್ಲಿ?
ಅಕಳಂಕವಾದರೆ ನೀ
ತ್ಯಾಗದೊಲುಮೆಯ ಪಥದಲ್ಲಿ
ಸುಖದ ಸಗ್ಗಕೆ ಶಾಂತಿ ಮಂತ್ರದ
ಬೀಜ ನೆಡುವೆಯ ನೆಪದಲ್ಲಿ?
ತೊಲಗು ಮೌನವೆ ತಬ್ಬು ಜೀವವ
ರಮಿಸು ರಸಮಯ ಜೀವಗಳ
ಒಲಿಸು ಲಾಲಿಸು ಮತ್ತೆ ಘಮಿಸು
ಸುಟ್ಟು ಸುಡಲಿದು ಸರಕುಗಳ!
ಜೀವ ಉರಿಯಲಿ ತಮವು ತಣಿಯಲಿ
ಹರಿದು ಹಾಡಲಿ ರಾಗಗಳು
ವೀಣೆ ಮಿಡಿಯುವ ತಂಪು ನಾದಕೆ
ಬೆಸೆದು ಬೀಳಲಿ ಭಾವಗಳು
ಸಿರಿ... ಪದಸಿರಿಯ ಪದಕಟ್ಟೋಣಕೆ ಹೊಸ ಆಯಾಮ ನಿಮ್ಮ ಕವನ. ತೊಲಗು ಮೌನವೇ ತಬ್ಬು ಜೀವವ ..ರಮಿಸು ರಸಮಯ ಜೀವಗಳ...ಬಹಳ ಸುಂದರ ಜೋಡಣೆ..
ReplyDeletenice one madam :)
ReplyDeleteತುಂಬಾ ತುಂಬಾ ಧನ್ಯವಾದಗಳು ಜಲನಯನ ಹಾಗೂ ಬದರಿನಾಥ ಸರ್ ಅವರಿಗೆ...
ReplyDeleteಜೀವ ಉರಿಯಲಿ ತಮವು ತಣಿಯಲಿ
ReplyDeleteಹರಿದು ಹಾಡಲಿ ರಾಗಗಳು
ವೀಣೆ ಮಿಡಿಯುವ ತಂಪು ನಾದಕೆ
ಬೆಸೆದು ಬೀಳಲಿ ಭಾವಗಳು
ಚಂದದ ಸಾಲುಗಳು
TUMBAA DHANUYAVADAGALU..
ReplyDelete