ಮಾತು ಮತ್ತು ಮೌನದ ಕುರಿತು........
ಮಾತು ಮತ್ತು ಮೌನದ ಕುರಿತು ಒಂದಿಷ್ಟು ಬರ್ಕೊಂಡೇ ಮುಂದಕ್ಕೋಗ್ತೀನಿ.. ನಿಮಗೆ ಬೇಸರ ಬರಬಾರದು ನನ್ನ ಮಾತಿಂದ ಇಲ್ಲ ತುಂಬಾ ದಿನ ಇತ್ತ ತಲೆಹಾಕದೇ ಉಳಿದುಬಿಡೋ ಮೌನದಿಂದ... "ಮಾತು ಬೆಳ್ಳಿ ಮೌನ ಬಂಗಾರ" ಅಂತ ಹಿರಿಯರು ಹೇಳಿದ್ದು ನಿಜ. ಮಾತು ತಿಕ್ಕಿದ ಹಾಗೆ ಹೊಳೆಯತ್ತೆ. ಕಲಿತರೆ ಬೆಳೆಯತ್ತೆ ಮುತ್ತಂತ ಮಾತು ಎಷ್ಟೋ ಮನಸುಗಳ ತಣಿಸತ್ತೆ. ಮನೆಗಳ ಮನಸುಗಳ ಬೆಸೆಯತ್ತೆ. ಮಿತವಿದ್ದರೆ ಮಾತಂದ. ಅದಕ್ಕಿಂತ ಮಾತು ಹಿತವಿದ್ದರೆ ಚಂದ.ಮನಸ್ಸಿನ ಮಾತುಗಳಿಗೆ ದನಿಯಾಗಲಾರದೇ ಅಳಿಸಿಹೋಗುವ ಪ್ರೀತಿಗಳೂ ಇಲ್ಲದಿಲ್ಲ. ಹಾಗಿದ್ದರೆ ಮಾತಂದೋ ಎಲ್ಲಕ್ಕೂ ಮೂಲವಾ? ಜಗಳಕ್ಕೆ ಮೂಲವೂ ಮಾತೇ..ಹಾಗಂತ ಮಾತನಾಡದೇ ಇದ್ದುಬಿಡಲಾದೀತಾ?
ಮಾತಾಗಲೀ ಮೌನವಾಗಲೀ ಅಗತ್ಯಬಿದ್ದಾಗ ಅಗತ್ಯ ಇರೋವಷ್ಟು ಆಡಿದ್ರೆ ಎಲ್ಲರಿಗೂ ಹಿತ. ಅಗತ್ಯಕ್ಕಿಂತ ಹೆಚ್ಚಾದರೆ ಏನಿದ್ದರೂ ವಿಷವೇ..ಅಗತ್ಯವಿದ್ದಾಗ ಮಾತಾಡದೇ ಮೌನ ನನ್ನ ದಿವ್ಯ ಸಾಧನವೆಂದು ಕುಳಿತುಕೊಳ್ಳುವುದೂ, ಮನೆಗೆ ಬೆಂಕಿಬಿದ್ದಾಗ ಧ್ಯಾನಕ್ಕೆ ತೊಡಗಿದ್ದೇನೆ ಅನ್ನೋದು ಒಂದೇ ಸಮ.ಇನ್ನು ಕೆಲವರದ್ದು ಹೀಗೆ... ನಿಮಗೂ ಅನುಭವವಿರಬಹುದು. ನಮ್ಮ ತೀರಾ ಆತ್ಮೀಯರಲ್ಲಿ ನಮಗೆ ನಂಬಿಕೆ ಇದೆ ಅನ್ನೋ ಕಾರಣಕ್ಕೆ ಹೇಗೂ ಬಿಡಿಸಲಾರದ ಬಂಧ ಅನ್ನೋ ಕಾರಣಕ್ಕೆ ಮನಸಿಗೆ ಬಂದಂತೆ ಮಾತನಾಡುವುದು. ಅದರ ಪರಿಣಾಮ ಯೋಚಿಸ್ತಾ ಕೂರೋದಿಲ್ಲ ನಾವು. ಯಾಕಂದ್ರೆ ಅವರು ನಮ್ಮವರು. ಆಮೇಲೆ ಒಂದು ಕ್ಷಮೆ ಕೇಳೋದಕ್ಕೂ ಬೇಜಾರಿಲ್ಲ ನಮಗೆ. ಹಾಗಿದ್ರೆ ಮಾತಾಡಿದರೂ ತಪ್ಪು. ಆಡದಿದ್ದರೂ ತಪ್ಪು.. ಏನು ಮಾಡ್ಬೇಕು ನಾವು?
ಇದಕ್ಕೆ ಉತ್ತರ ನಾನಂತೂ ಹೇಳೋದಿಲ್ಲ. ನನಗೆ ಗೊತ್ತಿಲ್ಲ. ಎಲ್ಲರಿಗೂ ಅವರವರಿಗೆ ತೋಚಿದಂತೆ ಇರುತ್ತಾರೆ. ಬದುಕುತ್ತಾರೆ. ಮಾತಾಡುತ್ತಾರೆ. ನಾನೂ ಹೀಗೇ..ಒಂದಿಷ್ಟು ತೋಚಿದಂತೆ ಹೇಳಿ ಹೋಗೋಕೆ ಬಂದಿರೋದು. ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯಗಳಿಗೆ, ಜವಾನ್ದಾರಿಗಳಿಗೆ ಅನುಗುಣವಾಗಿ ನಡೆದುಕೊಂಡಷ್ಟೇ ಮಾತನಾಡುವುದೂ ಮುಖ್ಯ. ಮಾತಿಂದ ಪರಿಹರಿಸಲಾಗದ್ದು ಅನಿಸಿದಾಗ ಮೌನ ಹಿತವೇ... ಆದರೆ ಮಾತಿನ ಜವಾಬ್ಧಾರಿ ಅತ್ಯಂತ ದೊಡ್ಡದು. ಮೌನ ಒಂದು ಸಂಪೂರ್ಣವೂ ಹೌದು.ನಿವರ್ಾಣ, ನಿಶ್ಯೇಶವೂ ಹೌದು. ಮೌನಕ್ಕೆ ಮನ ಬಂದಷ್ಟು ಅರ್ಥಗಳಿವೆ. ಆದರೆ ಮಾತಾಡಿದ ಮೇಲೆ ಅದು ಕೊಡುವ ಅರ್ಥ ಸಂದರ್ಭಸಹಿತವೇ ಆಗಿರುತ್ತದೆ. ಅದರ ಏಳು ಬೀಳುಗಳಿಗೆ ಆಡಿದವರು ಜವಾಬ್ಧಾರಿ ಹೊರಬೇಕಾಗುತ್ತದೆ. ಮೌನ ಹಾಗಲ್ಲ....
ಮೌನದಲ್ಲಿ ಏನಿಲ್ಲ? ಯೋಚಿಸಿ... ಸುಮ್ಮನಿದ್ದು ಬಿಡುವುದು ತುಂಬಾ ಒಳ್ಳೆಯ ಲಕ್ಷಣ. ಆದರೆ ಅದೆಂದೂ ಪೊಸಿಟಿವ್ ಆಗೇ ಇರತ್ತೆ ಅಂತೇನೂ ಇಲ್ಲ.ಬಿದ್ದ ಮಗುವಿಗೆ ನಿಮ್ಮ ಮೌನ ಪ್ರೀತಿಯನ್ನು ಹೇಳುವುದಿಲ್ಲ. ಮೌನದಲ್ಲೂ ಪ್ರೀತಿಸಲು ಅಂತಹ ಮನಸ್ಸನ್ನ ವ್ಯಕ್ತವಾಗಿಸುವ ಕಾರ್ಯಶುದ್ಧಿ ಬೇಕು. ಕ್ರಿಯೆಯಲ್ಲಿ ವ್ಯಕ್ತವಾಗದ ಪ್ರೀತಿ ಮಾತಿನಲ್ಲಿ ಎಷ್ಟು ವ್ಯಕ್ತವಾದರೂ ಅದು ಅಸಹಜವಲ್ಲವೇ? ಹಾಗಿದ್ದರೆ ಮಾತು ಹೆಚ್ಚು ಮೌನ ಹೆಚ್ಚು ಎಂದು ನೀವು ನಿರ್ಧರಿಸುವುದಾದರೂ ಹೇಗೆ?
ಹಿತವಾದ ಮಾತು, ಹಿತವಾದ ಮೌನ ಎರಡೂ ಸುಂದರವೇ.. ಒಂದು ಅಸೀಮ ಧ್ಯಾನಕ್ಕೆ, ಆನಂದದ ರಾಗಕ್ಕೆ ಅದ್ಭುತ ಏಕಾಂತಕ್ಕೆ, ಆತ್ಮದರ್ಶನಕ್ಕೆ ಭಗವ್ಭಕ್ತಿಗೆ ಅನಂತಾನಂತ ಪ್ರಕೃತಿಯ ವಿಕಾಸಕ್ಕೆ ಮೌನ ಅದ್ಭುತ ಸಂಗಾತಿ... ಹಾಗೇ ಒಂದು ಬದುಕಿಗೆ, ಮಾನವೀಯತೆ ನೆಲೆಗೆ, ಸಾಮಾಜಿಕ ಚಿಂತನೆಗೆ, ವಿಚಾರವಿನಿಮಯಕ್ಕೆ, ಭಾವಗಳ ಅಭಿವ್ಯಕ್ತಿಗೆ,
ಜಗತ್ತಿನ ಜೊತೆ ಸಂಪರ್ಕಕ್ಕೆ ಮಾತೇ ಬೇಕು. ಮತ್ತದು ಶ್ರೇಷ್ಠ ಮಾಧ್ಯಮ ಕೂಡ. ಕೆಟ್ಟ ಮಾತನಾಡುವವರ ಇಲ್ಲಿ ಗಮನಿಸುವುದು ಬೇಡ. ಒಳ್ಳೆಯ ಮಾತಿನ ಅಗತ್ಯ ಮನುಷ್ಯರಿಗಿದೆ. ಮನಸುಗಳಿಗಿದೆ. ಹಾಗೇ ಮಾತು ಮಾತು ಅಂತ ಇನ್ನೂ ಆಡಿದ್ರೆ ನೀವೆಲ್ಲ ಎದ್ದು ಓಡಿ ಬಿಡ್ತೀರ. ಸಾಕಿಷ್ಟು ಮೊದಲಮಾತಿಗೆ ವಿರಾಮದೊಂದಿಗೆ ನಿರಂತರ
ನಿಮ್ಮ ಜೊತೆ.........
ಮಾತು ಮತ್ತು ಮೌನದ ನಡುವಿನ ವಾಗ್ವಾದ ,,,,,,ನಿಜ ಇದನ್ನು ಓದಿದ ಮೇಲೆ ನನಗು ಅನ್ನಿಸ್ತು,,,ಜಾಸ್ತಿ,,ಮಾತನಾಡಿದರು ಕಷ್ಟ ,,ಜಾಸ್ತಿ ಮೌನವಾಗಿದ್ರು ಕಷ್ಟ.....ನೀವು ಹೇಳಿದ ಹಾಗೆ,,ಬಿದ್ದ ಮಗುವಿಗೆ,,ಮೌನ ಸಾಂತ್ವಾನ ಹೇಳುವುದಿಲ್ಲ.... ಮೇಡಂ...ಈ ಲೇಖನ ತುಂಬಾನೇ..ಇಷ್ಟ ಆಯಿತು,,ಇನ್ನಷ್ಟು ಕವನಗಳು ಮೌನವಾಗಿ ನಿಮ್ಮನ್ನು ಆವರಿಸಿಕೊಂಡು,,ಮಾತುಗಳ ರೂಪದಲ್ಲಿ,,,ಈ,,,ಬ್ಲಾಗ್ನಲ್ಲಿ..ಮೂಡುತ್ತಿರಲಿ...
ReplyDeleteಧನ್ಯವಾದಗಳು ಸತ್ಯ ಅವರಿಗೆ...
ReplyDeletedesha kaala vyakti ee 3 maatina parinaamavannu nirdhariso amshagalu....yaaru yaarige yaavaaga elli heliddu embudannaadharisi shrotuvina swabhaavakkanugunavaagi shaabdabodhavaagutte....yaaru hege sweekarisidaroo avaravara neleyelli avell samuchitavaagiye irutte....munde munde matirbhinnaa enno sooktiyannilli smarisabahudu...
ReplyDeleteanyway good effort...good luck
priya avare shubhaashayagalu. Blog moolaka
ReplyDeletesrujana sheelavaagi sa hrudayaralli beeru biduttiddeeraa. nimma rachanegalu khushi needuttive. Avashya munduvaresi.
Subraya Mattihalli
maatu mattu mouna gala naduve aatma mattu paramaatma nelesida bhava!
ReplyDeleteಮಾತಾಗಲೀ ಮೌನವಾಗಲೀ ಅಗತ್ಯಬಿದ್ದಾಗ ಅಗತ್ಯ ಇರೋವಷ್ಟು ಆಡಿದ್ರೆ ಎಲ್ಲರಿಗೂ ಹಿತ........... ತುಂಬಾ ಚನ್ನಾಗಿದೆ ನಿಮ್ಮ ಮೌನದೊಳಗೆ ಹುಟ್ಟಿದ ಮಾತಿನ ಸಂವಾದ...... ಆಗಾಗ ಮಾತಿನ ಮಧ್ಯೆ ಇಣುಕುವ ಮೌನ ......... ಎರಡೂ ಒಂದಕ್ಕೊಂದು ಬೆಸೆದುಕೊಂಡಿರುವ ರೀತಿಯನ್ನು ತುಂಬಾ ಚನ್ನಾಗಿ ವಿವರಿಸಿದ್ದೀರಿ..........ಸತೀಶ್ ಬಿ ಕನ್ನಡಿಗ
ReplyDeletemaati ninda shuruvaada lekhana moundalli mukthay vaayiyitu...sooper akka
ReplyDeleteMaatigu bhele ide..mounakku Bheleyide..adar naduve samarasyada Bhandvyada mounada Manada Matide.
maatu mattu mounada vishleshane chennaagide. ishtaa aaytu nimma baravanige shili chennaagide.
ReplyDeleteತುಂಬಾ ಧನ್ಯವಾಗಳು ಓದಿ ಅನಿಸಿಕೆಗಳ ತಿಳಿಸಿದ ತಮಗೆಲ್ಲರಿಗೂ...
ReplyDeleteಇಷ್ಟ ಆಯ್ತು ನೀವು ಬರೆದ ಪರಿ ಹೌದು ಬೇಕಾದಷ್ಟೇ ಮಾತಾಡೋದು ಒಂದು ಕಲೆ
ReplyDeleteಚೆನ್ನಾಗಿದೆ ಮಾತು-ಮೌನಗಳ ಕುರಿತ ಮಾತುಗಳು :-)
ReplyDelete