ಕಂಗಳಲಿ ಬತ್ತಿದೆಣ್ಣೆಯ ಹೊತ್ತು
ಕೈಗಳಲಿ ಬೆಳಗೋ ಹಣತೆಯ ಹಿಡಿದು
ನಸುನಗುವ ಮುಸುಕಿನದಿ ಮತ್ತೆ ಬಂದಿದೆ
ದೀಪಾವಳಿ! ದೀಪಗಳ ಹಬ್ಬ ದೀಪಾವಳಿ.
ಕತ್ತಲೆಯ ಹಿಂದೆ ಬೆಳಕಿನಲೆ ಬರಲೆಂದು
ಪುಟ್ಟ ಹಣತೆಯ ಹಿಡಿದು ಉರಿಸುತ್ತ ನಿಂದವಳು
ಕತ್ತಲೆಯ ಕೊಂದವಳು
ಚಿತ್ತದಲಿ ಬೆಂದವಳು....
ಜೀವನದಿ ಜೀವನ್ಮುಖಿ ಜೀವಸೆಲೆ ಸಮ್ಮಿಲನ
ಕತ್ತಲೆಯ ಕಡಲಿಂದ ಬೆಳಕಿನ ಆಭರಣ
ಮುತ್ತು ರತ್ನದ ತೇರ ಎಳೆದೆಳೆದು ನಿಂತವಳು
ಮತ್ತೆ ನಸುನಗುವ ಮುತ್ತೈದೆ ಹಣೆಯವಳು!
ಅವಳೊಡಲು ಬೆಂಕಿ... ಉರಿವ ಚಿತೆಯನ್ನ
ಕಂಬನಿಯ ಕೊಡ ಹಿಡಿದು ನಂದಿಸಿದ ಬೆಳಕಲ್ಲೇ
ಮತ್ತೆ ಬೆಳಕಿನ ಹಣತೆ ಹಚ್ಚಿದವಳು..
ನಿತ್ಯ ನಿಯತಿಗೆ ತನ್ನ ತನುಮನವ ಉರಿಸಿ ನಿಂತವಳು......
ಕತ್ತಲೆಯೇ ಬೆದರಿದೆ ಆ ಅಗ್ನಿಶಿಖೆಗೆ!
ಮತ್ತೆಲ್ಲಿ ಉಳಿದಿದೆ ಹೂನಗೆಯ ಒಳಬಗೆ!
ಹುಟ್ಟಿ ಬರುವುದೇ ಹಣತೆ ಹಿಡಿದವಳ ಕಿರುನಗೆ
ಅಳಿಯುವುದೇ ಅವಳ ಸುತ್ತಲಿನ ಕರಿನಗೆ!
ಕೈಗಳಲಿ ಬೆಳಗೋ ಹಣತೆಯ ಹಿಡಿದು
ನಸುನಗುವ ಮುಸುಕಿನದಿ ಮತ್ತೆ ಬಂದಿದೆ
ದೀಪಾವಳಿ! ದೀಪಗಳ ಹಬ್ಬ ದೀಪಾವಳಿ.
ಕತ್ತಲೆಯ ಹಿಂದೆ ಬೆಳಕಿನಲೆ ಬರಲೆಂದು
ಪುಟ್ಟ ಹಣತೆಯ ಹಿಡಿದು ಉರಿಸುತ್ತ ನಿಂದವಳು
ಕತ್ತಲೆಯ ಕೊಂದವಳು
ಚಿತ್ತದಲಿ ಬೆಂದವಳು....
ಜೀವನದಿ ಜೀವನ್ಮುಖಿ ಜೀವಸೆಲೆ ಸಮ್ಮಿಲನ
ಕತ್ತಲೆಯ ಕಡಲಿಂದ ಬೆಳಕಿನ ಆಭರಣ
ಮುತ್ತು ರತ್ನದ ತೇರ ಎಳೆದೆಳೆದು ನಿಂತವಳು
ಮತ್ತೆ ನಸುನಗುವ ಮುತ್ತೈದೆ ಹಣೆಯವಳು!
ಅವಳೊಡಲು ಬೆಂಕಿ... ಉರಿವ ಚಿತೆಯನ್ನ
ಕಂಬನಿಯ ಕೊಡ ಹಿಡಿದು ನಂದಿಸಿದ ಬೆಳಕಲ್ಲೇ
ಮತ್ತೆ ಬೆಳಕಿನ ಹಣತೆ ಹಚ್ಚಿದವಳು..
ನಿತ್ಯ ನಿಯತಿಗೆ ತನ್ನ ತನುಮನವ ಉರಿಸಿ ನಿಂತವಳು......
ಕತ್ತಲೆಯೇ ಬೆದರಿದೆ ಆ ಅಗ್ನಿಶಿಖೆಗೆ!
ಮತ್ತೆಲ್ಲಿ ಉಳಿದಿದೆ ಹೂನಗೆಯ ಒಳಬಗೆ!
ಹುಟ್ಟಿ ಬರುವುದೇ ಹಣತೆ ಹಿಡಿದವಳ ಕಿರುನಗೆ
ಅಳಿಯುವುದೇ ಅವಳ ಸುತ್ತಲಿನ ಕರಿನಗೆ!
No comments:
Post a Comment