ಅಳಲೊಂದು ಹೆಗಲು
ನಗಲೊಂದು ನೆಪವು
ನೀನಿರದ ಘಳಿಗೆ
ನಾನಿರದ ಜೀವ!
ನನ್ನೊಳಗೆ ಹುಟ್ಟು
ನನ್ನೊಳಗೆ ಮರಣ
ಸುಖವಲ್ಲವೇ ಗೆಳೆಯ
ಸತ್ಯದಾವರಣ!
ಚಿತ್ತವಿದು ಸಂಕಲ್ಪ
ಮುಕ್ತಿತತ್ವದ ಒಲವು
ಬತ್ತಿರುವ ಭಾವಗಳ
ಬೆಳಕ ಚಿಲುಮೆ
ರಕ್ತ ಮಾಂಸದ ಜೀವ
ಕುದಿ ಕಳೆವ ಭಾವ
ತಣ್ಣಗಾಗಿಸು ಎಲ್ಲ
ನಿರ್ಜೀವ ತತ್ವ.
ನಗಲೊಂದು ನೆಪವು
ನೀನಿರದ ಘಳಿಗೆ
ನಾನಿರದ ಜೀವ!
ನನ್ನೊಳಗೆ ಹುಟ್ಟು
ನನ್ನೊಳಗೆ ಮರಣ
ಸುಖವಲ್ಲವೇ ಗೆಳೆಯ
ಸತ್ಯದಾವರಣ!
ಚಿತ್ತವಿದು ಸಂಕಲ್ಪ
ಮುಕ್ತಿತತ್ವದ ಒಲವು
ಬತ್ತಿರುವ ಭಾವಗಳ
ಬೆಳಕ ಚಿಲುಮೆ
ರಕ್ತ ಮಾಂಸದ ಜೀವ
ಕುದಿ ಕಳೆವ ಭಾವ
ತಣ್ಣಗಾಗಿಸು ಎಲ್ಲ
ನಿರ್ಜೀವ ತತ್ವ.
ಮನೋಧರ್ಮಕು ಮೀರಿ ತಳೆಯಲಾರದು ಅನ್ಯ ನಿರ್ಧಾರ. ಮಾನವ ಜನುಮಕೆ ಇದೆಯಂತೊಂದು ಸಕಾರಣ. ಜೊತೆಗಿದೇ ಅಸಲಿನ ತುಮಲ:
ReplyDelete'ನೀನಿರದ ಘಳಿಗೆ
ನಾನಿರದ ಜೀವ!'
ಧನ್ಯವಾದಗಳು ಸರ್..
ReplyDeleteaahaa nice.
ReplyDelete