ಒಂದೂ ಕವಿತೆಯ ಬರೆಯಬಾರದೆನ್ನುವ
ಕೊಲೆಗಡುಕ ಮನಸು,
ಯಾಕೋ?
ಬರೆದದ್ದೆಲ್ಲವೂ ಕವಿತೆಯಾಗದಿದ್ದರೂ
ಕವಿಮನದ ಸೊಲ್ಲಾದೀತು
ಬರೆದುಬಿಡು ಎಂಬ
ಒಳ ಸುಳಿಯ ಹತ್ತಿಕ್ಕುವ
ಹುಚ್ಚೂ ನಿನಗ್ಯಾಕೋ?
ಹೂವರಳುವ ಭಾವ
ಬಯಲಾಸರೆಯಲ್ಲಿ
ಕುಣಿದು ಕುಪ್ಪಳಿಸುವ
ಎಳೆಗರುವಿನಂತ
ಮುಗ್ಧ ಚೆಲುವಿನ ಹೂವ
ಮತ್ತೆ ಮೂಡಿಸಬೇಡ,
ಚಿತ್ರ
ಹರಿಯುವೆದೆನೆಂಬ
ಕೊಸರು ಗಣ್ಣಿನ ಕಿಸುರು
ನಿನಗ್ಯಾಕೋ?
ಅಗರುಬತ್ತಿಯ ಹಚ್ಚಿ
ಪರಿಮಳವ ತೆಗೆದುಕೊಳ್ಳಬೇಡ
ಎಂಬಂತ ಸಣ್ಣತನ ನಿಂಗ್ಯಾಕೋ
ಸಣ್ಣ ಸಣ್ಣ ಖುಶಿಗಳೆಲ್ಲ
ಕಸಿದುಕೊಳ್ಳುವ
ನಿನ್ನ ಮನಸಿನ ಒಳಗೆ
ಅದೆಷ್ಟು ಸಣ್ಣತನಗಳ
ತುಂಬಿಕೊಂಡಿದ್ದೀ ಯಾಕೋ?
ಭಾವಗಳ, ಬಯಕೆಗಳ
ಬದುಕುಗಳ, ಕನಸುಗಳ
ನಡುವೆ ನಿನ್ನದು ಎಂತ
ದುಷ್ಟತನದಾಟ!
ಒಂದೊಮ್ಮೆ ಅನ್ನಿಸೀತು ನೋಡು
ಈ ನಿನ್ನ ಆಟದಾಳಗಳಲ್ಲಿ
ಸೋತು ಹೋದವರೆಲ್ಲ
ನೋಡು ಸಾಕೋ.
ಸಾಕೋ..
ಕೊಲೆಗಡುಕ ಮನಸು,
ಯಾಕೋ?
ಬರೆದದ್ದೆಲ್ಲವೂ ಕವಿತೆಯಾಗದಿದ್ದರೂ
ಕವಿಮನದ ಸೊಲ್ಲಾದೀತು
ಬರೆದುಬಿಡು ಎಂಬ
ಒಳ ಸುಳಿಯ ಹತ್ತಿಕ್ಕುವ
ಹುಚ್ಚೂ ನಿನಗ್ಯಾಕೋ?
ಹೂವರಳುವ ಭಾವ
ಬಯಲಾಸರೆಯಲ್ಲಿ
ಕುಣಿದು ಕುಪ್ಪಳಿಸುವ
ಎಳೆಗರುವಿನಂತ
ಮುಗ್ಧ ಚೆಲುವಿನ ಹೂವ
ಮತ್ತೆ ಮೂಡಿಸಬೇಡ,
ಚಿತ್ರ
ಹರಿಯುವೆದೆನೆಂಬ
ಕೊಸರು ಗಣ್ಣಿನ ಕಿಸುರು
ನಿನಗ್ಯಾಕೋ?
ಅಗರುಬತ್ತಿಯ ಹಚ್ಚಿ
ಪರಿಮಳವ ತೆಗೆದುಕೊಳ್ಳಬೇಡ
ಎಂಬಂತ ಸಣ್ಣತನ ನಿಂಗ್ಯಾಕೋ
ಸಣ್ಣ ಸಣ್ಣ ಖುಶಿಗಳೆಲ್ಲ
ಕಸಿದುಕೊಳ್ಳುವ
ನಿನ್ನ ಮನಸಿನ ಒಳಗೆ
ಅದೆಷ್ಟು ಸಣ್ಣತನಗಳ
ತುಂಬಿಕೊಂಡಿದ್ದೀ ಯಾಕೋ?
ಭಾವಗಳ, ಬಯಕೆಗಳ
ಬದುಕುಗಳ, ಕನಸುಗಳ
ನಡುವೆ ನಿನ್ನದು ಎಂತ
ದುಷ್ಟತನದಾಟ!
ಒಂದೊಮ್ಮೆ ಅನ್ನಿಸೀತು ನೋಡು
ಈ ನಿನ್ನ ಆಟದಾಳಗಳಲ್ಲಿ
ಸೋತು ಹೋದವರೆಲ್ಲ
ನೋಡು ಸಾಕೋ.
ಸಾಕೋ..
ಅರಿವಿದ್ದೋ ಅರಿವಿಲ್ಲದೆಯೋ ನಮ್ಮಲ್ಲಿ ಮನೆ ಮಾಡಿರುವ 'ಸಣ್ಣತನ'ದ ಭಾವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರ. ಕವಿತೆಯ ಆಶಯ ಮನೋ ಚಿಕಿತ್ಸಕ.
ReplyDeletehttp://badari-poems.blogspot.in/
"ಅಗರುಬತ್ತಿಯ ಹಚ್ಚಿ
ReplyDeleteಪರಿಮಳವ ತೆಗೆದುಕೊಳ್ಳಬೇಡ"
ಅತಿ ಮನಸ್ಸಿಗೆ ತಾಕುವ ಸಾಲುಗಳು. ಸುಂದರವಾಗಿದೆ ಸಣ್ಣತನವುಳ್ಳ ಮನಗಳ ಬಗ್ಗೆ.
ಸುಂದರ ಕವನ ಸಿರಿ ಅಕ್ಕ..
ReplyDeleteನಮ್ಮ ಇನ್ನೊಂದು ಮುಖವನ್ನ ನಾವೇ ಪ್ರಶ್ನೆ ಮಾಡಿ ಕೊಂಡ ಹಾಗಿದೆ.. :)
ಕವಿತೆಯಲ್ಲಿ ನಮ್ಮ ಮನಸ್ಸಿನ ಸಣ್ಣತನವನ್ನು ಚೆನ್ನಾಗಿ ಹೊರ ಹಾಕಿದ್ದೀರಿ
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ
Deleteತುಂಬಾ ಧನ್ಯವಾದಗಳು ಕವಿತೆಯನ್ನು ಓದಿ ಪ್ರತಿಕ್ರಿಯಿಸಿದ ಎಲ್ಲ ಮಿತ್ರರಿಗೂ. ಖಂಡಿತ ನಿಮ್ಮ ಬ್ಲಾಗಿಗೂ ಭೇಟಿಕೊಡ್ತೀನಿ ಚಂದ್ರಶೇಖರ ಅವರೆ.ನಿಮ್ಮ ಬ್ಲಾಗ್ ಲಿಂಕ್ (ವಿಳಾಸ) ಕೊಡಿ ದಯವಿಟ್ಟು.
ReplyDelete