ಯಾರಿಗೆ ಹೇಳಲಿ?
ಏನೆಂದು ಬರೆಯಲಿ?
ಭಾವಗಳ ಮಳೆ ಸುರಿಯೆ,
ಮನಸು ಬಂದ ಹಾಗೆಲ್ಲ
ಮನದ ಮಳೆಯಂತೆ
ಸುರಿದು ಬಿಡಲೊಮ್ಮೆ
ಎಲ್ಲಿರುವೆ ನೀನು
ಇನ್ನೆಲ್ಲಿ ನಾನು!
ನನ್ನ ಮುನಿಸಿಗೆ ಮಡಿಲು
ನನ್ನ ಕನಸಿಗೆ ಒಡಲು
ಜೀವ ಉಸಿರಿಗೆ ಕಡಲು
ಕಡಲಾದೆ ನೀನು!
ಕರಗಿಸದೇ ಉಳಿದು ಹೋದೆ
ನನ್ನ ನಾ ಕಲ್ಲು ಬಂಡೆಯಾಗಿ!
ಪ್ರತಿ ಬೆಳಗು ಕನ್ನಡಿಯ
ಹಂಗ್ಯಾಕೆ ಇನ್ನು?
ಸಿಂಗಾರದ ಸೀರೆಗೆ
ನೆರಿಗೆಗಳೇಕೆ ಇನ್ನು?
ನೀನಿರದ ದಿನ ದಿನಕು
ಯಾವ ರಾಗದ ಹೊನಲು!
ನುಡಿಸಲಿವೆ ತಂತಿ ಹರಿದ
ವೀಣೆ
ಹೊಸದೇ ಶೃತಿಯನ್ನು!
ಕೊಡಲೇನು ಗೆಳೆಯಾ
ವಿದಾಯಕ್ಕೆ ಮುನ್ನ?
ಕಣ್ಣ ಕೊನೆಯಂಚಲ್ಲಿ
ಸಣ್ಣಗೆ ಉಳಿದಿದೆ
ತಂಪು ತಂಪೆನ್ನುವ
ಹನಿ ಬಿಂದುಗಳು ನಿನ್ನ
ತಾಗಲಿ ಉಳಿದುಹೋಗಲಿವೆ
ಅಲ್ಲೇ
ತುಟಿಯಂಚಿನಲ್ಲೇ ....
ಏನೆಂದು ಬರೆಯಲಿ?
ಭಾವಗಳ ಮಳೆ ಸುರಿಯೆ,
ಮನಸು ಬಂದ ಹಾಗೆಲ್ಲ
ಮನದ ಮಳೆಯಂತೆ
ಸುರಿದು ಬಿಡಲೊಮ್ಮೆ
ಎಲ್ಲಿರುವೆ ನೀನು
ಇನ್ನೆಲ್ಲಿ ನಾನು!
ನನ್ನ ಮುನಿಸಿಗೆ ಮಡಿಲು
ನನ್ನ ಕನಸಿಗೆ ಒಡಲು
ಜೀವ ಉಸಿರಿಗೆ ಕಡಲು
ಕಡಲಾದೆ ನೀನು!
ಕರಗಿಸದೇ ಉಳಿದು ಹೋದೆ
ನನ್ನ ನಾ ಕಲ್ಲು ಬಂಡೆಯಾಗಿ!
ಪ್ರತಿ ಬೆಳಗು ಕನ್ನಡಿಯ
ಹಂಗ್ಯಾಕೆ ಇನ್ನು?
ಸಿಂಗಾರದ ಸೀರೆಗೆ
ನೆರಿಗೆಗಳೇಕೆ ಇನ್ನು?
ನೀನಿರದ ದಿನ ದಿನಕು
ಯಾವ ರಾಗದ ಹೊನಲು!
ನುಡಿಸಲಿವೆ ತಂತಿ ಹರಿದ
ವೀಣೆ
ಹೊಸದೇ ಶೃತಿಯನ್ನು!
ಕೊಡಲೇನು ಗೆಳೆಯಾ
ವಿದಾಯಕ್ಕೆ ಮುನ್ನ?
ಕಣ್ಣ ಕೊನೆಯಂಚಲ್ಲಿ
ಸಣ್ಣಗೆ ಉಳಿದಿದೆ
ತಂಪು ತಂಪೆನ್ನುವ
ಹನಿ ಬಿಂದುಗಳು ನಿನ್ನ
ತಾಗಲಿ ಉಳಿದುಹೋಗಲಿವೆ
ಅಲ್ಲೇ
ತುಟಿಯಂಚಿನಲ್ಲೇ ....
ಮನ ತಟ್ಟುವ ಕವನ
ReplyDeleteಪ್ರತಿ ಬೆಳಗು ಕನ್ನಡಿಯ
ReplyDeleteಹಂಗ್ಯಾಕೆ ಇನ್ನು?
ಇವೆರಡೂ ಸಾಲುಗಳನ್ನು ಮುಂದಿಟ್ಟುಕೊಂಡು ನಿಮ್ಮ ಕವನವನ್ನು ಹತ್ತಾರು ಪುಟ ವಿಶ್ಲೇಷಿಸಬಹುದು. ಅಷ್ಟು ಸರಕಿದೆ.
ನೀನಿಲ್ಲದೆ ನನಗೇನಿದೆ..
ReplyDeleteಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ..
ಕನಸೆಲ್ಲ ನಿನ್ನಲ್ಲೇ ಸೆರೆಯಾಗಿದೆ..
ಈ ಹಾಡು ನೆನಪಾಯ್ತು ಈ ಕವನ ಓದ್ತಾ ಇದ್ದ ಹಾಗೆ.. :)
ಧನ್ಯವಾದಗಳು.
ReplyDelete