ಮನಸಿನ ಹರಿಯುವಿಕೆಗೆ ಆನಂದಕ್ಕೆ ಪೃಕೃತಿಯಿದೆ. ಹಿಮ ಸುರಿಯುವ ಮುಂಜಾನೆಗಳಿವೆ. ಅದ್ಭುತ ಸೂರ್ಯಾಸ್ತಗಳಿವೆ. ಸಮುದ್ರವಿದೆ. ತಂಗಾಳಿಯಿದೆ. ಬೆಳದಿಂಗಳ ರಾತ್ರಿಗಳಿವೆ.. ಕತ್ತಲೆಯ ಮೈತ್ರಿಯಿದೆ. ಎಲ್ಲಾ ಇದೆ. ಆನಂದಿಸುವ ಮನಸೂ ಇದೆ. ಆದರೆ ಮನುಷ್ಯ ಬಯಸೋದು ತನ್ನ ನೋವು ನಲಿವುಗಳಿಗೆಲ್ಲ ಹಂಚಿಕೊಳ್ಳುವ ಇನ್ನೊಂದು ಮನಸಿನ ಆಸರೆಯನ್ನ... ಮನುಷ್ಯನ ಭಾವಗಳಿಗೆ ಮತ್ತೊಂದು ಮನಸಿನ ಆಸರೆಯ ಹುಚ್ಚು.... ಇದೂ ಸಹ ಅಂತದ್ದೇ ಒಂದು ಹುಚ್ಚು... ವಿಚಾರ ಭಾವಗಳಿಗೆಲ್ಲ ಅಕ್ಷರ ಕೊಡುವ ಹುಚ್ಚು... ಖಾಲಿಯಾಗುವ ಕನಸು.... ಅಂತದ್ದೊಂದುಯಾನದಲ್ಲಿ ನಿಮ್ಮ ಜೊತೆ.......







Wednesday, November 14, 2012

ಅಮರ ಪ್ರೇಮ


ಅಮರ ಪ್ರೇಮ
ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ 
ಹಗಲಿಡೀ ಕಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ 
ನಾಳೆ ಬರುವಿಯಂತೆ
ಕಾಯಿತ್ತಿರುವೆ ನಿನಗೆ

ನಿನ್ನ ಉರಿಕಿರಣಗಳ
ನೇವರಿಸಿ ಲಾಲಿಸುವ 
ಅವಳ ಕೈನತಂಪು
ಆಸ್ವಾದಿಸು.
ನಿನಗೂ ಬರಬಹುದು 
ಅವಳ ತಂಪು ಗುಣ.
ಆ ಹೃದಯ ಪ್ರೀತಿಗೆ
ಇರಲಿ ಋಣ.

ಎದೆಯೊಳಗೆ ಆರ್ಭಟದ
ಶಕ್ತಿಯಿದೆ,ರೋಷವಿದೆ
ಮುತ್ತು ರತ್ನಗಳಿವೆ.
ಅವಳೊಳಗೆ ಆದರೂ
ಅವಳದ್ದು ಅಗಾಧ ಪ್ರೇಮ!
ಅಗಾಧ ಸಹನೆ!

ವಾರಿಧೆಯೇ ಹಾಗೆ
ವಿವರಣೆಗೆ ನಿಲುಕದವಳು.
ಭಾಸ್ಕರನೆ ಹಾಗೆ.
ಸುಡು ಸುಡು ಬಿಸಿಲಿನವನು.
ಪ್ರತಿ ದಿನವೂ ಮಿಲನ!
ಪ್ರತೀ ದಿನವೂ ವಿರಹ!
ಬೆಳದಿಂಗಳ ರಾತ್ರಿಯಲಿ ಅಮರ ಪ್ರೇಮ!

3 comments:

  1. ನಿಮ್ಮ ಕಲ್ಪನೆ ತುಂಬಾ ಸೊಗಸಾಗಿದೆ....ಅದನ್ನ ಬರೆದ ರೀತಿ ಇನ್ನೂ ಸುಪರ್...

    ReplyDelete
  2. ಧನ್ಯವಾದಗಳು ದಿನಕರ ಮೊಗೇರ್ ಹಾಗೂ ಬದರಿನಾಥ ಪಲವಳ್ಳಿಯವರಿಗೆ...

    ReplyDelete