ಇದು ಲಕ್ಷ್ಮೀಪೂಜೆಯ ಹೊತ್ತು. ಮುಸ್ಸಂಜೆಯ ಈ ಸಮಯ ಮನೆಮನೆಗಳಲ್ಲಿ ದೀಪ ಹಚ್ಚುವ ಸಂಭ್ರಮ! ಅಂಗಡಿ, ಪ್ಯಾಕ್ಟರಿ, ಬ್ಯುಸಿನೆಸ್ ಏನೇ ಇರಲಿ.. ಉದ್ಯೋಗಸ್ಥರಿಗೆಲ್ಲ ತಮ್ಮ ಆದಾಯದ ಮೂಲವನ್ನು ಪೂಜಿಸಿ ಆ ಶ್ರೀಮಾತೆ ಲಕ್ಷ್ಮೀ ಯಲ್ಲಿ ಮನಃಪೂರ್ವಕ ಪ್ರಾಥರ್ಿಸಿ ಪೂಜಿಸಿ ಎಲ್ಲೆಲ್ಲು ದೀಪಗಳ ಹಚ್ಚಿಟ್ಟು ಸಂಭ್ರಸುವುದು ಕಾಣುತ್ತಿದ್ದೇವೆ.
ಹಾಗೇ ಒಂದು ಪುಟ್ಟ ದೀಪದೊಂದಿಗೆ ನನ್ನದೂ ಪ್ರಾರ್ಥನೆ ಮುಗಿಸಿ ನಿಮ್ಮೆದುರು ಹೀಗೆ ಮನಸು ಹರವಿಕೊಂಡು ಕೂತಿದ್ದೇನೆ
ಪೂಜೆಗಳೆಲ್ಲ ಮನಸಿನ ಸಂಭ್ರಮಕ್ಕೆ, ಶೃದ್ಧೆ ಭಕ್ತಿಗೆ. ದೇವರು ಒಂದು ದಿನವಲ್ಲ. ಪ್ರತಿ ದಿನವೂ ಪ್ರತಿಕ್ಷಣವೂ ಅವನ ಕರುಣೆಯ ಅವಶ್ಯಕತೆಯಿದೆ ನಮಗೆಲ್ಲರಿಗೂ..
ಇಂದಿನ ಈ ಪುಟ್ಟ ಹಣತೆಯಲ್ಲಿ ಹಚ್ಚಿಟ್ಟ ಎಲ್ಲ ದೀಪಗಳು ನಮ್ಮಬದುಕನ್ನೇ ಬೆಳಗಲಿ ಎಂಬ ಪ್ರಾರ್ಥನೆ ಅವಳಲ್ಲಿ.
ಈ ದಿನ ಅವಳಲ್ಲಿ ಇನ್ನಷ್ಟು ನಿವೇದನೆಗಳ ತಂದಿದ್ದೇನೆ! ಜೋಗಿತಿಯ ಜೋಳಿಗೆಯಲ್ಲಿ ಅವಳ ಕರುಣೆಗಾಗಿ ಬೇಡಿಕೆಯ ಪಟ್ಟಿಗಳಿವೆ! ತುಂಬಿಕೊಳ್ಳಲೆಂಬ ಶುದ್ಧ ಬೇಡಿಕೆಯಿದು.
ಖಾಲಿಯಾಗುವ ಹಂಬಲದಲ್ಲಿಯೇ ತುಂಬಿಕೊಳ್ಳುವ ಮನಸಿನ ಸೋಜಿಗಗಳಿವು!
ಮೊನ್ನೆ ಮೊನ್ನೆ ಪ್ರೀತಿಯಿಂದ ಸಮ್ಮಾನಿಸಿದ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೊಂದು ಮನಸ್ವೀ ಕೃತಜ್ಞತೆಯನ್ನು ಮೊಟ್ಟಮೊದಲು ಸಲ್ಲಿಸುತ್ತೇನೆ.
ಸಮ್ಮಾನವೆಂಬುದು ಹಾಗೆ ಸ್ವೀಕರಿಸುವ ಅರ್ಹತೆಗಳು ನನಗೆಷ್ಟಿವೆ ಗೊತ್ತಿಲ್ಲ ನನಗೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ನಮ್ಮದೇ ತಾಲೂಕಿನಲ್ಲಿ ನನಗಿಂತ ಹಿರಿಯರು, ಸಾಧನೆ ಮಾಡಿದವರು ಹಾಗೂ ಪ್ರತಿಭಾವಂತರೂ ಸಾಕಷ್ಟು ಜನರಿದ್ದಾರೆಂದು ಅರಿವಿನಿಂದಲೂ ವಿನಯದಿಂದಲೂ ಹೇಳಬಯಸುತ್ತೇನೆ. ಹಾಗಿದ್ದೂ ಸಹ ಈ ಸಮ್ಮಾನ ನನ್ನಂತ ಹೊಸತಲೆಮಾನ
ಹಲವು ಬರಹಗಾರರಿಗೆ ಸಲ್ಲುವುದು. ಮತ್ತು ಇದು ನನ್ನನ್ನೂ ಸೇರಿ ಇನ್ನಷ್ಟು ಜನರಿಗೆ ಸ್ಪೂರ್ತಿದಾಯಕಾವಾಗಿದ್ದು ಆ ಕಾರಣಕ್ಕೆ ಇದು ಶ್ಲಾಘನೀಯವೆಂದು ಹಾಗೂ ಸಾಹಿತ್ಯ ಪರಿಷತ್ತಿನ ಪ್ರೀತಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ.
ದೀಪಾವಳಿ ಈ ಶುಭ ಸಂದರ್ಬದಲ್ಲಿ ತಾಯಿ ಭಗವತಿ ಇನ್ನಷ್ಟು ಬರೆಯುವ ಓದುವ ಹಾಗೂ ಕನ್ನಡಾಂಬೆಯ ಸೇವೆ ಸಲ್ಲಿಸುವ ಅವಕಾಶ ನನಗೆ ದಯಪಾಲಿಸಲೆಂದು ಬೇಡಿಕೊಳ್ಳುತ್ತೇನೆ. ಅಂತಜರ್ಾಲದಲ್ಲಿ ಇತ್ತೀಚೆಗಷ್ಟೆ ಅಂಬೆಗಾಲಿಟ್ಟು ಬರೆಯುತ್ತಿರುವ ನನ್ನನ್ನು ಪ್ರೀತಿಯಿಂದ ಆದರಿಸಿದ ನನ್ನೆಲ್ಲ ಮಿತ್ರರಿಗೆ ತುಂಬು ಮನದ ಕೃತಜ್ಞತೆಗಳು. ನನ್ನ ಸಾಹಿತ್ಯ ಬಳಗದ ಎಲ್ಲ ಸ್ನೇಹಿತರಿಗೂ ನನ್ನ ಬೆಳೆಸಿದ ನನ್ನ ಬದುಕಿನ ಎಲ್ಲ ಸಂಗತಿಗಳಿಗೂ ನಾನು ಋಣಿಯಾಗಿದ್ದೇನೆ. ಮತ್ತೊಮ್ಮೆ ಎಲ್ಲರಿಗೂ ದೀಪಾವಳಿಯ ಶುಭಕೋರುತ್ತ.
ಇದೊಂದು ಪುಟ್ಟ ಸಾಲಿನೊಂದಿಗೆ ನಿಮ್ಮ
-ಸಿರಿ
ಕತ್ತಲೆಯ ರಾತ್ರಿಯಲಿ
ನಕ್ಷತ್ರಗಳ ಹಾಗೆ
ಬದುಕ ದಾರಿಯಲಿಂದು
ಬೆಳಕ ಹಣತೆ!
ಭಾವಗಳ ಬತ್ತಿಯಲಿ
ಪ್ರೀತಿ ತೈಲವನೆರೆದು
ಬೊಗಸೆ ಹಣತೆಯಲಿಟ್ಟ
ಚೆಲುವ ಕವಿತೆ!
ದೀಪಗಳ ಹಚ್ಚಿಟ್ಟು
ಹೊರಟ ಯಾತ್ರಿಕನಾರೋ
ತಿರುವಿಗೆಲ್ಲಿಯ ಬೆಳಕು
ಅವನೇ ತಾನೆ?
ಅಂತರಾತ್ಮನೆ ಜ್ಯೋತಿ
ಅವನೆ ಇಹದ ಅಕ್ಷಿ.
ಭವಕು ದಿವ್ಯತ್ವಕ್ಕೂ
ದೀಪಗಳೇ ಸಾಕ್ಷಿ!
ನಿಮ್ಮನ್ನು ಸಮ್ಮಾನಿಸಿದ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ನಮನಗಳು. ಇಂತಹ ಪುರಸ್ಕಾರಗಳು ನಿಮಗೆ ಸದಾ ಸಲ್ಲುತಿರಲಿ.
ReplyDeleteದೀಪಾವಳಿ ಹಬ್ಬದ ಶುಭಾಶಯಗಳು.
ಈ ಪುಟ್ಟ ಬರಹ ಮತ್ತು ಒಪ್ಪುವ ಕವಿತೆ ಎರಡೂ ವಿಶೇಷವಾಗಿದೆ.
www.badari-poems.blogspot.com
ಧನ್ಯವಾದಗಳು ಬದರಿನಾಥ ಅವರೆ... ನಿಮ್ಮ ಬೇಟಿ ತುಂಬಾ ಸಂತಸ ತಂದಿತು..
ReplyDelete