| AREHOLE SAHITYA SAMBHRMA |
ಕರಾವಳಿಯ ನಮಗೆಲ್ಲ ಸಮುದ್ರ ಹೊಸದೇನಲ್ಲ. ಆದರೆ ನನಗಂತೂ ಸಮುದ್ರದ ಅಲೆಗಳೆಂದರೆ ಅದೊಂದುತರಹದ ವಿಚಿತ್ರ ಆಕರ್ಷಣೆ. ಮಂಗಳೂರಿನ ಹೆಸರಿನ ಜೊತೆ ಈ ಅಲೆಅಲೆಗಳು ಕುಣಿದಾಡಿದ್ದವು ಹೊರಡುವ ಮೊದಲಿನ ಕನಸಿನಲ್ಲಿ! ಆದರೇನು! ಈ ಬಾರಿಯೂ ಸಮುದ್ರದಂಚಿಗೆ ಹೋಗುವ ಸಮಯವಾಗಲೇ ಇಲ್ಲ. ಆದರೆ ಅಂತಹ ಸಮುದ್ರವನ್ನು ಮರೆಸುವಂತಹ ಹೊಸದೊಂದು ಪ್ರಪಂಚದಲ್ಲಿ ವಿಹರಿಸುವಂತೆ ಮಾಡಿದ್ದು ಅರೆಹೊಳೆ ಪ್ರತಿಷ್ಠಾನ ದ ಸಾಹಿತ್ಯ ಸೌರಭ ಕಾರ್ಯಕ್ರಮ. ಮತ್ತು 3ಕೆ ಬಳಗದ ಸಹಯೋಗ, ಸ್ನೇಹ... ಎಲ್ಲೆಲ್ಲೋ ಹುಟ್ಟಿ ಎಲ್ಲೋ ಬೆಳೆದ ನೂರಾರು ಜೀವಗಳ ಸ್ನೇಹ ಬೆಸೆಯುವಂತೆ ಮಾಡುವ ಶಕ್ತಿಯಿರೋದು ಈ ಸಾಹಿತ್ಯ, ಸಂಗೀತ ಹಾಗು ಶಿಲ್ಪ, ಚಿತ್ರಗಳಂತ ಲಲಿತ ಕಲೆಗಳಿಗೆ ಮಾತ್ರ ಸಾಧ್ಯ. ನಾಲ್ಕಾರು ವರ್ಷಗಳ ಹಿಂದೆ ಸಾಪ್ಟ್ ವೇರ್ ಪ್ರಪಂಚವೆಂದರೆ ಸಾಹಿತ್ಯದಿಂದ ದೂರವಿರುವ ಪ್ರಪಂಚ ಎಂಬ ಕಲ್ಪನೆಗಳಿತ್ತು. ಮನುಷ್ಯ ಭಾವಗಳಿಗಿಂತ ಅವರೆಲ್ಲ ಹಣ, ಮತ್ತು ತಂತ್ರಜ್ಞಾನಗಳ ಮಾತ್ರ ಅರ್ಥಮಾಡಿಕೊಳ್ಳಬಲ್ಲರೆಂಬ ಹುಸಿ ಅಪವಾದವೊಂದಿತ್ತು ಸಾಹಿತ್ಯವಲಯದಲ್ಲಿ. ಅಷ್ಟೇ ಅಲ್ಲದೇ ಗಂಭೀರವಾದ ಅಥವಾ ಜೀವನಕ್ಕೆ ಸನಿಹವಾದ ಸಾಹಿತ್ಯ ಪ್ರಪಂಚದಿಂದ ಅವರನ್ನು ಪ್ರತ್ಯೇಕವೆಂಬ ಭಾವವೂ ಬುದ್ಧಿ ಜೀವಿಗಳಲ್ಲಿತ್ತು. ಇಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ
ತಂತ್ರಜ್ಞಾನದ ಬಳಕೆಯಿಂದಲೇ ಅದೆಷ್ಟೋ ಸಾಹಿತ್ಯ ಮಾತ್ರವಲ್ಲ ಸ್ನೇಹಗಳು, ಉತ್ತಮ ಕೆಲಸಗಳು, ನಡೆಯುತ್ತಿವೆ. ಅಲ್ಲಿಯೇ ಹುಟ್ಟಿ ಬೆಳೆಯುತ್ತ ಕಲಿಯುತ್ತ, ಭಾವಗಳಿಗೆ ಜೀವ ತುಂಬುತ್ತ ಸಾಹಿತಿಗಳಾಗಿ ಬೆಳೆಯುತ್ತ ಸಾಮಾಜಿಕ ಪ್ರಪಂಚದಲ್ಲಿ ತಮ್ಮ ಹೆಸರನ್ನು ಪ್ರತಿಷ್ಠಾಪಿಸಿಕೊಂಡ ಅನೇಕ ಜನರನ್ನು ನಾವು ನೋಡುತ್ತಿದ್ದೇವೆ. ಅಲ್ಲಿಗೆ ತಂತ್ರಜ್ಞಾನ ಜೀವಂತಿಕೆಯಿಂದ ಹೊರತಾಗೇನೂ ಉಳಿಯದೇ ನಿರಂತರ ಚಲನೆಯಲ್ಲಿರುವ ಸಂಸ್ಕೃತಿಗೆ ಪೂರಕವಾಗುಳಿದಿದೆ ಎಂಬುದು ಸತ್ಯವಾಯಿತು. ಯಾವುದನ್ನೇ ಆಗಲಿ ಬದಲಾವಣೆಗೆ ಒಗ್ಗಿಕೊಳ್ಳುವ ಮುನ್ನ ಒಂದಿಷ್ಟು ಸಂಘರ್ಷಕ್ಕೊಳಪಡುವುದು ಇರುವುದೇ. ಕೆಟ್ಟದ್ದು ಒಳ್ಳೆಯದು ಎರಡೂ ಪರಿಣಾಮಗಳನ್ನು ಅನುಭವಿಸಬೇಕಾದದ್ದೇ. ಈ ಎಲ್ಲವನ್ನು ಮೀರಿ ಕೆಟ್ಟದ್ದನ್ನು ಬದಿಗಿರಿಸಿ ತಂತ್ರಜ್ಞಾನದ ಬಹುಪಯೋಗಿ ಸಾಮಥ್ರ್ಯವನ್ನು ಸದುಪಯೋಗಿಸಿಕೊಂಡಾಗ ಒಂದು ಹೊಸ ಉದಯ, ಹೊಸ ಹುಟ್ಟು ತನ್ನ ಅಸ್ತಿತ್ವವನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಇದಕ್ಕೆ ಅಂತಜರ್ಾಲ ಬರಹಗಾರರ ಸಮಾವೇಷ ನಡೆಸಿ ಅಚ್ಚುಕಟ್ಟಾಗಿ ಅದನ್ನು ನಿರ್ವಹಿಸುತ್ತಿರುವ ಅರೆಹೊಳೆ ಪ್ರತಿಷ್ಟಾನ ಹಾಗು 3ಕೆ ಬಳಗವೇ ಸಾಕ್ಷಿಯಾಗಿದೆ.
ಕಾರ್ಯಕ್ರಮಕ್ಕೆ ನಾನು ತಲುಪಿದ್ದು ತಡವಾಗಿಯೇ... ಅಲ್ಲಿಯವರೆಗಿನ ಕಾರ್ಯಕ್ರಮಗಳ ಮಿಸ್ ಮಾಡಿಕೊಂಡದ್ದಕ್ಕಾಗಿ ಪಶ್ಚಾತ್ತಾಪವಿದೆ. ಆದರೆ ಕಾರ್ಯಕ್ರಮದ ರೂಪುರೇಷೆ, ನಿರ್ವಹಣೆ ಮತ್ತು ಕಾರ್ಯಕ್ರಮದ ಕುರಿತಾಗಿ ನನ್ನ ಅನಿಸಿಕೆಗಳ ವ್ಯಕ್ತಪಡಿಸಲು ನಾನಿದ್ದ ಸ್ವಲ್ಪ ಹೊತ್ತೇ ಸಾಕು. ಸಾಹಿತ್ಯ ಸಮಾರಂಭಗಳೆಂದರೆ ಭಣ ಬಣಗುಡುತ್ತಿರುವ ಸಭೆಗಳು! ಕೆಲವೊಮ್ಮೆ ವೇದಿಕೆಎದಿರಿಗಿಂತ ವೇದಿಕೆಯ ಮೇಲಿನ ಸಂಖ್ಯೆಯೇ ಜಾಸ್ತಿ ಎನ್ನಿಸಿ ಹಾಸ್ಯಾಸ್ಪದವೆನ್ನಿಸಿದ ಸಭೆಗಳನ್ನೂ ನೋಡಿದ್ದ ನನಗೆ ಮಂಗಳೂರಿನ ಸಾಹಿತ್ಯಸಕ್ತ ಪ್ರಜೆಗಳಿಗೆ ವಂದನೆ ಸಲ್ಲಿಸಬೇಕೆನ್ನಿಸಿದೆ. ಆಸಕ್ತ ವಿದ್ಯಾಥರ್ಿ ಸಮುದಾಯ ಸಹ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಯೋಜನ ಪಡೆದುಕೊಂಡಿದ್ದು ಸಂಘಟಕರ ಶ್ರಮವನ್ನು ಸಾರ್ಥಕಗೊಳಿಸಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಆಯೋಜಕರು ಬಹಳಷ್ಟು ಶ್ರಮವಹಿಸದ್ದಾರೆಂದು ಬೇರೆ ಹೇಳಬೇಕಿಲ್ಲ. ಅಂತಜರ್ಾಲದ ಬಳಕೆ ಮತ್ತು ಸದುಪಯೋಗದ ಕುರಿತಾದ ಮಾಹಿತಿಯುಕ್ತ ಸಂವಾದ ವಿದ್ಯಾಥರ್ಿಗಳಿಗಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿತ್ತು. ಆಗಮಿಸಿದ ಎಲ್ಲ ಅತಿಥಿಗಳ ಉಪನ್ಯಾಸಗಳು ವಿದ್ವತ್ಪೂರ್ಣವಾಗಿದ್ದು
ಸಾಹಿತ್ಯದ ಪೂವರ್ಾಪರಗಳ ಚಿಂತನೆಗೆ ಸಾಕಷ್ಟು ವಿಷಯಗಳಿದ್ದವು. ಇಷ್ಟಲ್ಲದೇ ಇಂದಿನ ಹೆಸರಾಂತ ಸಾಹಿತ್ಯ ದಿಗ್ಗಜರುಗಳು ಸಹ ಅಂತಜರ್ಾಲವನ್ನು ಹೇಗೆ ಸದುಪಯೋಗಪಡಿಸಿಕೊಂಡಿದ್ದಾರೆಂಬುದು ವೇಗದ ಬದುಕಿನ ಸವಾಲಿಗೆ ಒಡ್ಡಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿತ್ತು.
ಇನ್ನು ಕವಿತೆ ಕಾವ್ಯದ ಕುರಿತು ಒಂದೆರಡು ಮಾತು ಹೇಳಲೇಬೇಕು. 3ಕೆ ಬಳಗದ ಸದಸ್ಯರಾಗಲೀ ಉಳಿದ ಆಸಕ್ತರಾಗಲೀ ಕವಿತೆಗಳ ಕುರಿತು ಚಚರ್ೆಗೆ ಇಳಿದುಕೊಳ್ಳಲಿಲ್ಲ ಎಂಬುದು ಸತ್ಯವಾದರೂ ಒಂದು ಸಮಯಕ್ಕೆ ಕವಿತೆಗಳನ್ನು ಓದಿದರೆ ಕೇಳುವವರಿಲ್ಲ, ಬರೆದರೆ ಓದುವವರಿಲ್ಲ ಎಂಬಂತ ಸ್ಥಿತಿಯಿಂದ ಹೊರಬಂದ ಇಂದಿನ ಬೆಳವಣಿಗೆಯನ್ನು ಗಮನಿಸಿದರೆ ಮೌಲ್ಯವೇ ಒಂದು ಮೈಲಿಗಲ್ಲು ಎಂದುಕೊಳ್ಳುವುದು ಸಮಂಜಸವಲ್ಲ ಎನ್ನಿಸುತ್ತದೆ. ಈ ಕಾರಣದಿಂದ ಒಬ್ಬೊಬ್ಬರಾಗಿ ಸಾಹಿತ್ಯಾಸಕ್ತರು ಬೆಳೆಯುತ್ತಾರೆ. ಒಂದಿನ ಇವರೆಲ್ಲರೂ ದೊಡ್ಡ ಲೇಖಕರಾಗದಿರಬಹುದು. ಆದರೆ ಉತ್ತಮ ಓದುಗರಾಗುತ್ತಾರೆಂಬ ನಂಬಿಕೆ ನನ್ನದು. ಒಬ್ಬ ಉತ್ತಮ ಓದುಗನನ್ನು ತಯಾರಿಸುವುದು ಸಹ ಸಾಹಿತ್ಯಕ್ಕೆ ಮಾತ್ರ ಸಾಧ್ಯ. ಅದಕ್ಕೆಂದೇ ಬಾಲಿಶ ಬೆಳವಣಿಗೆಗಳು ಸಹ ಎಲ್ಲೋ ಒಂದು ಶುಭಾರಂಭವನ್ನೇ ಸೂಚಿಸುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಬಳಗದ ಕವಿತೆಗಳು ಭವಿಷ್ಯದಲ್ಲಿ ಉತ್ತಮವಾದುದನ್ನು ಸಾಧಿಸುತ್ತಾರೆಂದು ನಿರೀಕ್ಷಿಸಬಹುದು.
ಕಾವ್ಯ ಒಂದು ಸೀಮಿತ ವ್ಯಾಖ್ಯೆಗೆ ನಿಲುಕುವ ಶಬ್ಧವಲ್ಲ. ಇದರ ಆಳ ಅಗಲ ವಿಸ್ತಾರ ತುಂಬಾ ವಿಶಾಲವಾಗಿದೆ. ಕವಿತೆ ಹುಟ್ಟುವುದು ಮತ್ತು ಕಟ್ಟುವುದು ಎಂಬ ಎರಡು ವಿಧಗಳಿವೆ. ಕಾವ್ಯದ ಕುರಿತಾಗಿ ಅದೆಷ್ಟೇ ವ್ಯಾಖ್ಯೆಗಳ ಬಳಸಿದರೂ ಇನ್ನಷ್ಟು ಉಳಿಯುತ್ತದೆ. ವ್ಯಾಕರಣ, ಶಬ್ಧ, ಸೌಂದರ್ಯ, ಉಪಮೆ ಅಲಂಕಾರಗಳು. ಇವೆಲ್ಲವೂ ಕಾವ್ಯಕ್ಕೆ ಪೂರಕ. ಭಾವಗಳು ಕಾವ್ಯದ ಜೀವಾಳ. ಹಾಗಿದ್ದಾಗಲೂ ಕಾವ್ಯ ವಿಮಶರ್ೆಗೊಳ್ಳುವುದು ಶಬ್ಧ, ಅಲಂಕಾರ ಬಳಕೆಯಿಂದಾಗಿ.. ಇವನ್ನೆಲ್ಲ ನಾನು ತುಂಬಾ ತಿಳಿದಿದ್ದೇನೆಂದಲ್ಲ. ಆದರೆ ನಾವು ತಿಳಿದಿರುವುದಕ್ಕಿಂತ ಹೆಚ್ಚು ವಿಶಾಲವೂ ವಿಸ್ತಾರವೂ ಆದ ಕಾವ್ಯವನ್ನು ನಾವೆಲ್ಲ ಹೀಗೇ ಅಂತ ನಿರ್ಣಯಿಸುವ ತಪ್ಪನ್ನು ಮಾಡದೇ ಕಾವ್ಯದೆದುರು ಒಂದು ವಿನಮ್ರತೆಯನ್ನು ಕಾಯ್ದುಕೊಂಡಾಗ ನಮ್ಮ ಕವಿತ್ವಕ್ಕೆ ಹೆಚ್ಚು ಶಕ್ತಿತುಂಬಬಹುದೆಂಬುದು ನನ್ನ ಅನಿಸಿಕೆ.ಈ ಮಾತಿನ ಜೊತೆಗೆ ಇನ್ನು ಸಾಹಿತ್ಯ ಪ್ರಪಂಚದಲ್ಲಿ ಕಣ್ಬಿಡುತ್ತಿರುವ ನಮಗೆಲ್ಲ ಆ ಅಕ್ಷರಮಾತೆಯ ಕೃಪಾ ಕಟಾಕ್ಷವಿರಲೆಂಬ ಪ್ರಾರ್ಥನೆ.
ನಾವೆಲ್ಲ ಕವಿತೆ ಗೀಚುವುದಕ್ಕಿಂತ ದೊಡ್ಡದು ನಮ್ಮ ಗೀಚಿದ ಕವಿತೆಗಳಿಗೂ ಒಂದು ವೇದಿಕೆ ಕಟ್ಟಿಕೊಡುವ ಮನಸುಗಳದ್ದು. ಮೊನ್ನೆಯಷ್ಟೇ ಕೇಳಿದ ಒಂದು ಮಾತು ಇಲ್ಲಿ ನೆನಪಾಗುತ್ತದೆ."ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಹಸ್ತಗಳೇ ಶ್ರೇಷ್ಠ" ಎಂಬುದು. ಅಂತ ಶ್ರೇಷ್ಠ ಕೆಲಸ ಇಂತಹ ಕಾರ್ಯಕ್ರಮದ ಸಂಘಟನೆ. ಎಷ್ಟೋ
ಮನಸುಗಳ ಸ್ನೇಹಗಳ ಬೆಸೆಯುವ ಕೆಲಸಕ್ಕೆ ನಮ್ಮೆಲ್ಲರ ನಮನವಿರಲಿ. ಈ ಕಾರ್ಯಕ್ರಮದ ಹಿಂದೆ ದುಡಿದ ಎಲ್ಲ ಕೈಗಳಿಗೂ ನಮ್ಮ ಹೃದಯಪೂರ್ವಕ ವಂದನೆಗಳು. ಅಂತಜರ್ಾಲ ಪ್ರಪಂಚದ ಬಂಧು ಬಾಂಧವರೇ ಸ್ನೇಹಪೂರ್ಣ ಮನಸುಗಳು ಹೀಗೆ ಜೀವಂತಿಕೆಯಿಂದ ಸದಾ ಅರಳುತ್ತಿರಲಿ. ಮತ್ತೆ ಸಿಗೋಣ
ನಿಮ್ಮ ಸಿರಿ.
ಸಿರಿ ಅವ್ರೆ,
ReplyDeleteನಿಮ್ಮ ಬ್ಲಾಗ್ ಗೆ ನನ್ನ ಮೊದಲ ಭೇಟಿ ಇದು.....ಚೆನ್ನಾಗಿದೆ ನಿಮ್ಮ ಬ್ಲಾಗ್.....
ಇನ್ನು ಮಂಗಳೂರಿನ ಕಾರ್ಯಕ್ರಮದ ಬಗ್ಗೆ ತುಂಬಾ ಸುಂದರವಾಗು ವರ್ಣಿಸಿದ್ದೀರಿ...ಅಲ್ಲಿ ನಿಮ್ಮನ್ನು ಭೇಟಿ ಮಾಡಿ ಸಂತೋಷವಾಯಿತು....'೩ ಕೆ' ಯಲ್ಲಿ ಪ್ರಕಟವಾಗುವ ನಿಮ್ಮ ಮುಂಜಾವಿನ ಕವನಗಳ ಅಭಿಮಾನಿ ನಾನು.....ಹೀಗೆ ಬರೀತಾ ಇರಿ....ಧನ್ಯವಾದಗಳು.....
ಬಿಡುವಿದ್ದಾಗ ನನ್ನ ಬ್ಲಾಗ್ ಗೆ ಭೇಟಿ ಕೊಡಿ..
http://ashokkodlady.blogspot.com
Siri madam,
ReplyDeleteNanu MangaLurina laarykramadallidde...
nimma vivaraNe chennaagide....
ತುಂಬಾ ತುಂಬಾ ಧನ್ಯವಾದಗಳು. ಅಶೋಕ್ ವಿ. ಶೆಟ್ಟಿಯವರಿಗೆ ಹಾಗೂ ದಿನಕರ್ ಮೊಗೇರ್ ಅವರಿಗೆ.. ನಿಮ್ಮನ್ನು ಮಂಗಳೂರಿನ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದು ನನಗೂ ತುಂಬಾ ಖುಷಿಯಾಯಿತು. ಅಶೋಕ್ ಸರ್ ತಮ್ಮ ಬ್ಲಾಗ್ ಗೆ ಖಂಡಿತ ಭೇಟಿಕೊಡುತ್ತೇನೆ. ಅಭಿಮಾನಕ್ಕೆ ವಂದನೆಗಳು.....
ReplyDelete