ಸಾವಿನ ಮನೆಯಲ್ಲಿ ನಿಂತು
ಸಾಂತ್ವನಗಳ ಯಾರಿಗೆ ಹೇಳಲಿ?
ಸತ್ತಂತೆ ಬದುಕುವ ಜೀವಗಳಿಗಾ!
ಸತ್ತು ಬದುಕುವ ಆತ್ಮಗಳಿಗಾ!
ವಿಶ್ವಾತ್ಮನವನಲ್ಲಿ ಕಾರಣವ ಕೇಳಲಾರೆ.
ಚಿರಂತನಕೆ ಚಿತೆ ಸುಡದು.
ಮತ್ತಿಲ್ಲಿ ಮೌನ, ಗದ್ಗದ,
ಕಣ್ಣಂಚ ವಿಷಾದ, ವಿವರಣೆಗಳು
ಈ ಕ್ಷಣಕೆ ಮೂಕವಿಲ್ಲಿ.!
ಬೋಳುಮರದ ಮಸ್ತಕದಿ
ಮತ್ತೆ ಮೂಡದ ಚಿತ್ರಗಳು.
ಕತ್ತಿನ ತುಂಬಾ ತುಂಬಿದ ಕರಿನೆರಳು!
ಅತ್ತಿತ್ತ ಸರಿಯದ ಕಣ್ರೆಪ್ಪೆಗಳು
ತುಂಬಿ ನಿಂತ ಜೀವ ಕೊಳಗಳು.
ಓ ಸಾವೇ ಎಲ್ಲಿದ್ದಿ ನಿ?
ಹೇಗಿದ್ದಿ?ನಂಗೂಂದಿಷ್ಟಾದರೂ
ಬಿಟ್ಟುಗೊಡು ನಿನ್ನ ಗುಟ್ಟು.
ಮತ್ತೆಂದಾದರೂ ಬರಲೇ ಬೇಕಲ್ಲ ನಾನೂ ಸುಟ್ಟು!
ಸಾವಿನ ಮನೆಗೆ ಸಾಂತ್ವನದ ನೆಲೆಗಟ್ಟು
ಸತ್ಯ ನಿತ್ಯವೆಂಬ ಈ ನುಡಿಗಟ್ಟು!
ಸಾಂತ್ವನಗಳ ಯಾರಿಗೆ ಹೇಳಲಿ?
ಸತ್ತಂತೆ ಬದುಕುವ ಜೀವಗಳಿಗಾ!
ಸತ್ತು ಬದುಕುವ ಆತ್ಮಗಳಿಗಾ!
ವಿಶ್ವಾತ್ಮನವನಲ್ಲಿ ಕಾರಣವ ಕೇಳಲಾರೆ.
ಚಿರಂತನಕೆ ಚಿತೆ ಸುಡದು.
ಮತ್ತಿಲ್ಲಿ ಮೌನ, ಗದ್ಗದ,
ಕಣ್ಣಂಚ ವಿಷಾದ, ವಿವರಣೆಗಳು
ಈ ಕ್ಷಣಕೆ ಮೂಕವಿಲ್ಲಿ.!
ಬೋಳುಮರದ ಮಸ್ತಕದಿ
ಮತ್ತೆ ಮೂಡದ ಚಿತ್ರಗಳು.
ಕತ್ತಿನ ತುಂಬಾ ತುಂಬಿದ ಕರಿನೆರಳು!
ಅತ್ತಿತ್ತ ಸರಿಯದ ಕಣ್ರೆಪ್ಪೆಗಳು
ತುಂಬಿ ನಿಂತ ಜೀವ ಕೊಳಗಳು.
ಓ ಸಾವೇ ಎಲ್ಲಿದ್ದಿ ನಿ?
ಹೇಗಿದ್ದಿ?ನಂಗೂಂದಿಷ್ಟಾದರೂ
ಬಿಟ್ಟುಗೊಡು ನಿನ್ನ ಗುಟ್ಟು.
ಮತ್ತೆಂದಾದರೂ ಬರಲೇ ಬೇಕಲ್ಲ ನಾನೂ ಸುಟ್ಟು!
ಸಾವಿನ ಮನೆಗೆ ಸಾಂತ್ವನದ ನೆಲೆಗಟ್ಟು
ಸತ್ಯ ನಿತ್ಯವೆಂಬ ಈ ನುಡಿಗಟ್ಟು!
No comments:
Post a Comment